ಪಾಪ್ ಸಂಗೀತ ಕೇಳಿದ ತಪ್ಪಿಗೆ ಬಾಲಕನ ಶಿರಚ್ಛೇದ ಮಾಡಿದ ಐಸಿಸ್

ಶುಕ್ರವಾರ, 19 ಫೆಬ್ರವರಿ 2016 (16:02 IST)
ಇರಾಕಿನಲ್ಲಿ ಐಎಸ್‌ಐ ಉಗ್ರಗಾಮಿ ಸಂಘಟನೆಯ ಭದ್ರಕೋಟೆ ಮೊಸುಲ್‌ನಲ್ಲಿ  ಪಾಪ್ ಸಂಗೀತ ಕೇಳಿದ ಬಾಲಕನ ತಲೆಯನ್ನು ಐಸಿಸ್ ಜಿಹಾದಿ ಸಂಘಟನೆ ಕಡಿಯುವ ಮೂಲಕ ಪೈಶಾಚಿಕ ಕೃತ್ಯವೆಸಗಿದೆ.  ಶುಕ್ರವಾರದ ಪ್ರಾರ್ಥನೆಯನ್ನು ತಪ್ಪಿಸಿಕೊಂಡ ಇಬ್ಬರನ್ನು ಐಸಿಸ್ ಗುಂಡು ಹಾರಿಸಿ ಹತ್ಯೆ ಮಾಡಿದೆ.
 
ಇರಾಕ್‌ನಲ್ಲಿ ಉದ್ದಕ್ಕೂ ಹರಡಿಕೊಂಡಿರುವ ಶತ್ರುಪಡೆಗಳು ಇರಾಕ್‌ನಾದ್ಯಂತ ಸತತ ಮಿಲಿಟರಿ ಹಿನ್ನಡೆಗಳನ್ನು ಅನುಭವಿಸಿದೆ. ತನ್ನ ತಂದೆಯ ದಿನಸಿ ಅಂಗಡಿಗಳಲ್ಲಿ ಬಾಲಕ  ಅಯಾಮ್ ಹುಸೇನ್ ಸಂಗೀತವನ್ನು ಆಸ್ವಾದಿಸುವಾಗ ಗಸ್ತು ತಿರುಗುತ್ತಿದ್ದ ಐಸಿಸ್ ಉಗ್ರರು ಅವನನ್ನು ಹಿಡಿದರು.
 
ಪಾಶ್ಟಿಮಾತ್ಯ ಸಂಗೀತ ಕೇಳುತ್ತಿದ್ದ ಬಾಲಕನನ್ನು ಶರಿಯತ್ ಕೋರ್ಟ್‌ಗೆ ಹಾಜರುಪಡಿಸಿದಾಗ ಬಾಲಕನಿಗೆ ಮರಣದಂಡನೆ ಶಿಕ್ಷೆಯನ್ನು ಅದು ನೀಡಿತು. ಅದಾದ ಬಳಿಕ ಸಾರ್ವಜನಿಕವಾಗಿ ಅವನ ರುಂಡಚ್ಛೇದ ಮಾಡಿ ಅವನ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
 
ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ  ಮೂಡಿಸಿದೆ. ಇದು ಮೊಸುಲ್‌ನಲ್ಲಿ ಮೊದಲ ಪ್ರಕರಣವಾಗಿದ್ದು, ಪಾಶ್ಚಿಮಾತ್ಯ ಸಂಗೀತ ಆಲಿಕೆಯನ್ನು ಷರಿಯಾ ಕೋರ್ಟ್ ಇದುವರೆಗೆ ನಿಷೇಧಿಸುವ ನಿರ್ಧಾರ ಕೈಗೊಂಡಿಲ್ಲ.
 
ಮುಖ್ಯ ಮಸೀದಿಯಲ್ಲಿ ಪ್ರಾರ್ಥನೆಗೆ ಹಾಜರಿಯಾಗಲು ವಿಫಲರಾದ ಇಬ್ಬರು ಯುವಕರನ್ನು ಕಳೆದ ಶುಕ್ರವಾರ ಬಂಧಿಸಿ ಮಸೀದಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಶರಿಯತ್ ಕೋರ್ಟ್ ಸದಸ್ಯರೊಬ್ಬರು ಹೇಳಿಕೆಯೊಂದನ್ನು ಓದಿ ಪ್ರಾರ್ಥನೆಯನ್ನು ತಪ್ಪಿಸಿಕೊಳ್ಳುವ ಯಾರೇ ಆದರಿಗೂ ಇದೇ ರೀತಿಯ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ ಬಳಿಕ ಯುವಕರಿಗೆ ಗುಂಡಿಕ್ಕಲಾಯಿತು.
 

ವೆಬ್ದುನಿಯಾವನ್ನು ಓದಿ