ಐಸಿಸ್ ಉಗ್ರರೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ 10 ಮಹಿಳೆಯರ ಜೀವಂತ ದಹನ

ಸೋಮವಾರ, 6 ಜೂನ್ 2016 (20:38 IST)
ಐಸಿಸ್ ಹೋರಾಟಗಾರರೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ 19 ಮಹಿಳೆಯರನ್ನು ಜೀವಂತವಾಗಿ ದಹಿಸಿದ ಹೇಯ ಘಟನೆ ಇರಾಕ್ ದೇಶದ ಮೊಸುಲ್ ನಗರದಲ್ಲಿ ವರದಿಯಾಗಿದೆ.
 
ಕುರ್ದಿಶ್ ಎಆರ್‌ಎ ಸುದ್ದಿ ಸಂಸ್ಥೆ ಪ್ರಕಾರ, ಮಹಿಳೆಯರನ್ನು ಕಬ್ಬಿಣದ ಸಲಾಕೆಗಳಿಗೆ ಕಟ್ಟಿಹಾಕಿದ ಐಸಿಸ್ ಉಗ್ರರು ಅವರನ್ನು ಜೀವಂತವಾಗಿ ದಹಿಸುವುದನ್ನು ನೂರಾರು ಜನರು ನೋಡಿದ್ದಾರೆ ಎಂದು ವರದಿ ಮಾಡಿದೆ. 
 
ಐಸಿಸ್ ಹೋರಾಟಗಾರರಿಗೆ ಸೆಕ್ಸ್ ಸುಖ ಕೊಡಲು ನಿರಾಕರಿಸಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಅಬ್ದುಲ್ಲಾ ಅಲ್ ಮಲ್ಲಾ ಎನ್ನುವ ವರದಿಗಾರ ಮಾಹಿತಿ ನೀಡಿದ್ದಾರೆ. 
 
ಕಳೆದ 2014ರಿಂದ ಸಾವಿರಾರು ಯಜ್ಡಿ ಮಹಿಳೆಯರ ಮೇಲೆ ಅತ್ಯಾಚಾರ, ಹತ್ಯೆಯಂತಹ ಹೇಯ ಕೃತ್ಯಗಳನ್ನು ಐಸಿಎಸ್ ನಡೆಸುತ್ತಿದೆ. ಸುಮಾರು 4 ಲಕ್ಷ ಮಹಿಳೆಯರು ದೇಶವನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪಲಾಯನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಪ್ರಸಕ್ತ ವಾರದಲ್ಲಿಯೇ ಐಸಿಸ್ ಉಗ್ರರು ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ 250 ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ