ಅಮೆರಿಕ ಪತ್ರಕರ್ತನ ರುಂಡ ಕತ್ತರಿಸಿದ ವಿಡಿಯೋ ಬಿಡುಗಡೆ: ಐಎಸ್‌ಐಎಸ್ ಸೇಡು

ಬುಧವಾರ, 20 ಆಗಸ್ಟ್ 2014 (15:47 IST)
ಐಎಸ್‌ಐಎಸ್ ಬಿಡುಗಡೆ ಮಾಡಿದ ಅಮೆರಿಕಕ್ಕೊಂದು ಸಂದೇಶ ಎಂಬ ಶೀರ್ಷಿಕೆಯ 5 ನಿಮಿಷಗಳ ವಿಡಿಯೋದಲ್ಲಿ ಮುಸುಕುಧಾರಿ ಉಗ್ರಗಾಮಿಯೊಬ್ಬ ಅಮೆರಿಕದ ಪತ್ರಕರ್ತನೊಬ್ಬನ ರುಂಡವನ್ನು ಕತ್ತರಿಸುತ್ತಿರುವ ಭೀಭತ್ಸ ದೃಶ್ಯ ಪ್ರಸಾರವಾಗಿದೆ. ಇರಾಕ್‌ನಲ್ಲಿ ತಮ್ಮ ಸಂಘಟನೆ ವಿರುದ್ಧ  ಅಮೆರಿಕದ ವೈಮಾನಿಕ ದಾಳಿಗಳಿಗೆ ಸೇಡುತೀರಿಸಿಕೊಳ್ಳಲು ಛಾಯಾಪತ್ರಿಕೋದ್ಯೋಗಿ ಜೇಮ್ಸ್ ಫಾಲಿಯನ್ನು ಹತ್ಯೆ ಮಾಡಿದ್ದಾಗಿ ಇಸ್ಲಾಮಿಕ ಭಯೋತ್ಪಾದಕ ಹೇಳಿಕೊಂಡಿದ್ದು, ಇದು ಐಎಸ್‌ಐಎಸ್ ಉಗ್ರಗಾಮಿಗಳ ಕೌರ್ಯಕ್ಕೆ ಸಾಕ್ಷಿಯೊದಗಿಸಿದೆ.
 
ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಖಚಿತಪಟ್ಟಿಲ್ಲ ಎಂದು ಬರಾಕ್ ಒಬಾಮಾ ಆಡಳಿತ ಹೇಳಿದೆ.ಗುಪ್ತಚರ ಇಲಾಖೆ ಈ ವಿಡಿಯೋ ನೈಜವೆಂದು ದೃಢಪಡಿಸಿದರೆ, ಅಮಾಯಕ ಪತ್ರಕರ್ತನ ನಿರ್ದಯ ಹತ್ಯೆಗೆ ಅಮೆರಿಕಕ್ಕೆ ದಂಗಾಗಲಿದೆ ಎಂದು ಶ್ವೇತಭವನ ಭದ್ರತಾ ಮಂಡಳಿ ವಕ್ತಾರೆ ತಿಳಿಸಿದ್ದಾರೆ. ಸುಮಾರು 2 ವರ್ಷಗಳ ಹಿಂದೆ ಫಾಲಿ ಸಿರಿಯಾದಲ್ಲಿ ನಾಪತ್ತೆಯಾಗಿದ್ದರು.

ಈ ವಿಡಿಯೋವನ್ನು ಈಗ ತೆಗೆಯಲಾಗಿದ್ದು, ಅಧ್ಯಕ್ಷ ಒಬಾಮಾ ಇರಾಕ್ ಮೇಲಿನ ಇಸ್ಲಾಮಿಕ್ ರಾಜ್ಯ ಹೋರಾಟಗಾರರ ಮೇಲೆ ಅಮೆರಿಕದ ವೈಮಾನಿಕ ದಾಳಿಗೆ ಅಧಿಕಾರ ನೀಡುವ ಒಬಾಮಾ ಪ್ರಕಟಣೆಯ ಕ್ಲಿಪ್ ಕೂಡ ಒಳಗೊಂಡಿದೆ.40 ವರ್ಷ ವಯಸ್ಸಿನ ಫಾಲಿ ಬೋಸ್ಟನ್ ಮೂಲದ ಗ್ಲೋಬಲ್ ಪೋಸ್ಟ್‌ಗೆ ಹವ್ಯಾಸಿ ವರದಿಗಾರರಾಗಿದ್ದು, 22 ತಿಂಗಳ ಹಿಂದೆ ಸಿರಿಯಾದಲ್ಲಿ ಆಂತರಿಕ ಯುದ್ಧದ ವರದಿ ನೀಡುತ್ತಿದ್ದ ಸಂದರ್ಭದಲ್ಲಿ ಅಪಹರಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ