ಫೇಸ್‌ಬುಕ್ ಸುಂದರಿಯರಿಂದ ದೂರವಿರಿ, ಇಲ್ಲ ನಿಮ್ಮ ಶಿರಚ್ಛೇದನ ಖಚಿತ

ಶನಿವಾರ, 18 ಫೆಬ್ರವರಿ 2017 (13:19 IST)
ಫೇಸ್‌ಬುಕ್‌ನಲ್ಲಿ ಸುಂದರ ಮುಖಾರವಿಂದದ ಹುಡುಗಿಯರ ಜತೆ ಸಲಿಗೆಯಿಂದಿದ್ದೀರಾ? ನಿಮ್ಮ ಉತ್ತರ ಹೌದೆಂದಾದಲ್ಲಿ ನೀವು ಎಚ್ಚೆತ್ತುಕೊಳ್ಳಲೇಬೇಕಾದ ಸಮಯವಿದು. 
ಯಸ್, ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಈ ಸುಂದರ ಯುವತಿಯರನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ವೈರಿಗಳ ತಲೆ ಕತ್ತರಿಸಿ ಅಂತರ್ಜಾಲದ ಮೂಲಕ ಅದನ್ನು ಬಿತ್ತರಿಸಿ ಜಗತ್ತಿಗೆ ಭಯ ಹುಟ್ಟಿಸಿರುವ ಈ ಮೂಲಭೂತವಾದಿ ಸಂಘಟನೆ ಮತ್ತೀಗ ಫೇಸ್‌ಬುಕ್ ಮೂಲಕ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಆಕರ್ಷಣೀಯ ಯುವತಿಯರಿಗೆ ಭಯೋತ್ಪಾದನೆ ತರಬೇತಿ ನೀಡುತ್ತಿರುವ ಐಸಿಎಸ್ ಆ ಮೂಲಕ ಯುವಕರನ್ನು ತನ್ನ ಬಲೆಗೆ ಕೆಡವುತ್ತಿದೆ. ಅದಕ್ಕೂ ಮೊದಲು ಸುಂದರ ಯುವತಿಯರ ಬ್ರೈನ್‌ವಾಶ್ ಮಾಡಿ ಅವರನ್ನು ತನ್ನ ಕಡೆ ಸೆಳೆಯುತ್ತಿದೆ. 
 
ಇತ್ತೀಚಿಗೆ ಐಸಿಸ್ ಸೇರಿದ್ದ 17 ವರ್ಷದ ಯುವತಿ ಕಾದಿಜಾ ಸುಲ್ತಾನಾ ವಾಯುದಾಳಿಯಲ್ಲಿ ದುರ್ಮರಣವನ್ನಪ್ಪಿದ್ದಾಳೆ. ಆಕೆಯ ಇಬ್ಬರು ಸ್ನೇಹಿತರು ಸಹ ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.
 
ಸುಲ್ತಾನರ ಮುಗ್ಧ ಪೋಷಕರು ಹೇಳುವ ಪ್ರಕಾರ ಅಮೀರಾ ಅಬ್ಬಾಸಿ ಮತ್ತು ಶಮೀಮಾ ಬೇಗಮ್ ಸಂಪರ್ಕಕ್ಕೆ ಬಂದ ಮೇಲೆ ಮಗಳ ವರ್ತನೆಯಲ್ಲಿ ಬದಲಾವಣೆಯಾಗುತ್ತಾ ಬಂತು. ಈಸ್ಟಕ್ ಹಬ್ಬದ ಸಂದರ್ಭದಲ್ಲಿ ಆಕೆ ಏಕಾಏಕಿ ಮನೆಯಿಂದ ನಾಪತ್ತೆಯಾದಳು. ಆ ಸಂದರ್ಭದಲ್ಲಿ ಆಕೆಯ ಸ್ನೇಹಿತರು ಸಹ ಕಾಣದಾಗಿದ್ದರು. ಅಂತರಾಷ್ಟ್ರೀಯ ಪೊಲೀಸರಿಂದ ಈ ಮೂವರು ಐಸಿಸ್ ಸೇರಿರುವುದು ಬೆಳಕಿಗೆ ಬಂತು. ಆದರೆ ಅವರಿಗೆ ಎಷ್ಟರ ಮಟ್ಟಿಗೆ ಬ್ರೈನ್‌ವಾಶ್ ಮಾಡಲಾಗಿತ್ತೆಂದರೆ ಎಷ್ಟೇ ಭಾವನಾತ್ಮಕ ಮನವಿ ಮಾಡಿದರೂ ಮೂವರು ಹಿಂತಿರುಗಲು ಒಪ್ಪಲಿಲ್ಲ.   
 
ಐಸಿಸ್ ಪಾಳೆಯ ಸೇರಿದ್ದ ಈ ಮೂವರು ಅಲ್ಲಿ ಉಗ್ರರನ್ನು ಮದುವೆಯಾಗಿ, ಅವರ ವಿಚಾರಧಾರೆಗೆ ಅನುಸಾರವಾಗಿ ಆದರ್ಶ ಪತ್ನಿಯರಾಗಿ ಬದುಕು ಸಾಗಿಸ ಹತ್ತಿದ್ದರು. 
 
ಈ ಮೂವರು ಯುವತಿಯರಷ್ಟೇ ಅಲ್ಲ, ಇಂತಹ ಸಾವಿರಾರು ಯುವತಿಯರು ಐಸಿಸ್ ಬಲೆಯಲ್ಲಿ ಬಿದ್ದು ಹದಿಹರೆಯದಲ್ಲೇ ಹಾದಿ ತಪ್ಪಿದ್ದಾರೆ, 2015ರ ಸಾಲಿನಲ್ಲಿ ಸುಮಾರು 56 ಯುವತಿಯರು ಇದೇ ರೀತಿಯಲ್ಲಿ ಲಂಡನ್‌ನಿಂದ ಐಸಿಸ್ ಮುಖ್ಯತಾಣವಾದ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ. ಯಾವುದೋ ಪ್ರಭಾವಕ್ಕೆ ಒಳಗಾಗಿ ಹಾದಿ ತಪ್ಪುವ ಈ ಸಣ್ಣ ಪ್ರಾಯದ ಯುವತಿಯರಿಗೆ ಅಲ್ಲಿಗೆ ಹೋದ ಮೇಲಷ್ಟೇ ತಾವು ಎಂತಹ ಕೂಪದಲ್ಲಿ ಬಿದ್ದೆವೆಂಬುದು ಅರ್ಥವಾಗುತ್ತದ. ಆದರೆ ಅಲ್ಲಿಗೆ ಕಾಲ ಮಿಂಚಿ ಹೋಗಿರುತ್ತದೆ. ಹೋಗುವ ಹಾದಿಯಷ್ಟೇ ಅವರಿಗೆ ನಿಚ್ಚಳವಾಗಿರುತ್ತದೆ. ಅಲ್ಲಿರುವುದು ಕೇವಲ ಒನ್ ವೇ. ಹಿಂತಿರುಗುವ ಪ್ರಶ್ನೆಯೇ ಇಲ್ಲ. ಅವರ ಶವ ಕೂಡ ವಾಪಸ್ಸಾಗುವುದಿಲ್ಲ. ಅವರ ಮುಂದಿನ ಪಯಣ ನೇರವಾಗಿ ಯಮಪುರಿಗೆ. ಅದು ಕೂಡ ಕರಾಳ ಸಾವು.
 
ಸುಲ್ತಾನಾ ಮತ್ತು ಆಕೆಯ ಸ್ನೇಹಿತರ ಪೋಷಕರ ವಕೀಲರ ಪ್ರಕಾರ ಶಮೀಮಾ ಮತ್ತು ಅಮೀರಾ ಇನ್ನು ಬದುಕಿರಬಹುದು. ಕಳೆದ ವರ್ಷ ತನ್ನ ಸಹೋದರಿಗೆ ಫೋನ್ ಕರೆ ಮಾಡಿದ್ದ ಕಾದಿಜಾ ಅಲ್ಲಿಂದ ಮರಳಲು ಬಯಸಿರುವುದಾಗಿ ಹೇಳಿದ್ದಳು. ಆದರೆ ಆ ಯೋಜನೆಯನ್ನು ಅರ್ಧಕ್ಕೆ ಕೈ ಬಿಟ್ಟಿದ್ದಳು. ಕಾರಣ ಆಕೆಯ ಪಾಳೆಯದಲ್ಲಿದ್ದ ಯುವತಿಯೋರ್ವಳು ಪರಾರಿಯಾಗಲು ಯತ್ನಿಸಿದಾಗ ಆಕೆಯನ್ನು ಸೆರೆ ಹಿಡಿದು ಬಹಿರಂಗವಾಗಿ ತಲೆ ಕತ್ತರಿಸಲಾಗಿತ್ತು. ಇದಾದ 5 ತಿಂಗಳ ಬಳಿಕ ರಷ್ಯಾದ ಸೈನಿಕರು ನಡೆಸಿದ ವಾಯುದಾಳಿಯಲ್ಲಿ ಸುಲ್ತಾನಾ ಸಾವನ್ನಪ್ಪಿದ್ದಳು.

ವೆಬ್ದುನಿಯಾವನ್ನು ಓದಿ