ಮಾರಕ ಕರಾಚಿ ಬಸ್ ದಾಳಿಯ ಹಿಂದೆ ಐಸಿಸ್ ಕೈವಾಡ ಶಂಕೆ

ಮಂಗಳವಾರ, 13 ಅಕ್ಟೋಬರ್ 2015 (15:59 IST)
ಕಳೆದ ಮೇ ತಿಂಗಳಿನಲ್ಲಿ ಕರಾಚಿಯಲ್ಲಿ 45 ಶಿಯಾ ಪಂಗಡದ ಜನರ ನಿರ್ದಯ ಹತ್ಯೆಯ ಹಿಂದೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕೈವಾಡವಿದೆ ಎಂದು ಪಾಕಿಸ್ತಾನಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು. ಆದರೆ ಸರ್ಕಾರ ಜಿಹಾದಿ ಗುಂಪು ಇಸ್ಲಾಮಿಕ್ ಸ್ಟೇಟ್ ದೇಶದಲ್ಲಿ ಉಪಸ್ಥಿತಿ ಹೊಂದಿಲ್ಲ ಎಂದು ಸುದೀರ್ಘಕಾಲದಿಂದ ನಿಲುವನ್ನು ಹೊಂದಿತ್ತು.

 ಕರಾಚಿಯಲ್ಲಿ ಬಂದೂಕುದಾರಿಗಳು ಬಸ್‌ ಮೇಲೆ ದಾಳಿ ಮಾಡಿ ಇಸ್ಮೇಲ್ ಅಲ್ಪಸಂಖ್ಯಾತ ಸಮುದಾಯವನ್ನು ಕಗ್ಗೊಲೆ ಮಾಡಿತ್ತು. ಇಸ್ಲಾಮಿಕ್ ಸ್ಟೇಟ್ ಇದಕ್ಕೆ ಹೊಣೆ ಹೊತ್ತುಕೊಂಡು, ಪಾಕಿಸ್ತಾನದ ದಾಳಿಯ ಹಿಂದೆ ತಮ್ಮ ಕೈವಾಡವಿದೆಯೆಂದು ಹೇಳಿದ್ದರು.  ಆದರೆ ಈ ಸಂಘಟನೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಇಸ್ಲಾಮಾಬಾದ್ ನಿರಾಕರಿಸಿತ್ತು. ಕಳೆದ ಜೂನ್‌ನಲ್ಲಿ ಕರಾಚಿ ದಾಳಿಯ ತನಿಖೆ ನಡೆಸುತ್ತಿದ್ದ ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳು ಇನ್ನೊಂದು ಉಗ್ರಗಾಮಿ ಸಂಘಟನೆ ಲಷ್ಕರ್ ಎ ಜಾಂಗ್ವಿ ಮೂಲಕ ಐಎಸ್ ಸಂಪರ್ಕ ಹೊಂದಿರಬಹುದು ಎಂದು ಭಾವಿಸಿದ್ದಾರೆ.
 
ಲಷ್ಕರ್ ಎ ಜಾಂಗ್ಲಿ ಅಂತಾರಾಷ್ಟ್ರೀಯ ಪ್ರಭಾವ ವಿಸ್ತರಣೆಗೆ ಈ ದಾಳಿ ನಡೆಸಿರಬಹುದು ಎಂದು ತನಿಖೆದಾರರು ಶಂಕಿಸಿದ್ದು, ಐಎಸ್‌ ಈ ದಾಳಿಗೆ ಫಂಡಿಂಗ್ ಮಾಡಿರಬಹುದು ಎಂದು ಹೇಳಿದ್ದರು. ಆದರೆ ಮಂಗಳವಾರ ಪಾಕಿಸ್ತಾನದ ಮಾಜಿ ಒಳಾಡಳಿತ ಸಚಿವ ರೆಹ್ಮಾನ್ ಮಲ್ಲಿಕ್  ಐಎಸ್ ಕರಾಚಿ ದಾಳಿಯ ಹಿಂದೆ ಶೇ. 100ರಷ್ಟು ಕೈವಾಡ ನಡೆಸಿದೆ ಎಂದು ಅವರ ಸಮಿತಿಗೆ ಸಿಂಧ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥರ ಸಾಕ್ಷ್ಯವನ್ನು ಉದಾಹರಿಸಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ