ಹೊಸ ಕರೆನ್ಸಿಯನ್ನು ಬಹಿರಂಗ ಮಾಡಿದ ಇಸ್ಲಾಮಿಕ್ ಸ್ಟೇಟ್

ಮಂಗಳವಾರ, 1 ಸೆಪ್ಟಂಬರ್ 2015 (19:48 IST)
ಭಯೋತ್ಪಾದಕ  ಸಂಘಟನೆ ಇಸ್ಲಾಮಿಕ್ ಸ್ಟೇಟ್ ಒಂದು ಗಂಟೆಯ ಅವಧಿಯ ವಿಡಿಯೋದಲ್ಲಿ ತನ್ನ ಕರೆನ್ಸಿಯನ್ನು ಬಹಿರಂಗಮಾಡಿದೆ. ಶನಿವಾರ ರೈಸ್ ಆಫ್ ಖಲೀಫಾ ಎಂಬ ಹೆಸರಿನ ಈ ವಿಡಿಯೊದಲ್ಲಿ ಚಿನ್ನದ ದಿನಾರ್ ಮತ್ತೆ ಮರಳಿರುವುದಾಗಿ ಘೋಷಿಸಿದೆ.  ಅಮೆರಿಕದ ಡಾಲರ್ ಬಂಡವಾಳಷಾಹಿಯ ಗುಲಾಮಗಿರಿಯಿಂದ ಮುಕ್ತವಾಗಲು ಈ ಕರೆನ್ಸಿ ಸೃಷ್ಟಿ ನೆರವಾಗುತ್ತದೆಂದು ಸಂಘಟನೆ ತಿಳಿಸಿದೆ. 
 
ಐಎಸ್ ಉಗ್ರನೊಬ್ಬ ಅಮೆರಿಕನ್ ಉಚ್ಚಾರಣೆಯಲ್ಲಿ ಅರೇಬಿಕ್ ಉಪಶೀರ್ಷಿಕೆಯೊಂದಿಗೆ ಸ್ವಯಂಘೋಷಿತ ಕಲೀಫೇಟ್‌ನಲ್ಲಿ  ಹೊಸ ನಾಣ್ಯಗಳು, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಟಂಕಿಸುವ ಯೋಜನೆಯನ್ನು ಪ್ರಕಟಿಸಿದ್ದಾನೆ.  ಬಂಡವಾಳಷಾಹಿಯು ಸೈತಾನ ವ್ಯವಸ್ಥೆಯಾಗಿದ್ದು, ಅಮೆರಿಕ ಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿ ಪಾವತಿಯು ಕಪಟದ ಅಸ್ತ್ರ ಎಂದು ಕರೆದಿದೆ.
 
 ಈ ಫೂಟೇಜ್ ಅನ್ನು ಐಎಸ್ ಮೀಡಿಯಾ ವಿಂಗ್ ಅಲ್ ಹಯಾತ್ ಬಿಡುಗಡೆ ಮಾಡಿದ್ದು, ಕಳೆದ ನವೆಂಬರ್‌ನಲ್ಲಿ ಅದಕ್ಕೆ ಹೊಸ ಕರೆನ್ಸಿ ಟಂಕಿಸುವ ಯೋಜನೆಯನ್ನು ಪ್ರಕಟಿಸಿದ ಬೆನ್ನಿಹಿಂದೆ ಈ ವಿಡಿಯೋ ದೃಶ್ಯಾವಳಿ ಬಿಡುಗಡೆ ಮಾಡಿದೆ. 
 
 

ವೆಬ್ದುನಿಯಾವನ್ನು ಓದಿ