ಬ್ರಿಟನ್ ಮೇಲೆ ದಾಳಿ ನಡೆಸಲು ಐಸಿಎಸ್ ಉಗ್ರರ ಸಂಚು: ಪ್ರಧಾನಿ ಕ್ಯಾಮರೂನ್

ಸೋಮವಾರ, 29 ಜೂನ್ 2015 (18:47 IST)
ಐಸಿಎಸ್ ಉಗ್ರರು ಸಿರಿಯಾ ಮತ್ತು ಇರಾಕ್ ನಗರಗಳಲ್ಲಿರುವವರೆಗೆ ಸಂಕಷ್ಟ ತಪ್ಪಿದ್ದಲ್ಲ. ಸಿರಿಯಾ ಮತ್ತು ಇರಾಕ್‌ನಲ್ಲಿರುವ ಕೆಲ ಐಸಿಎಸ್ ಉಗ್ರರು ಬ್ರಿಟನ್‌ನಲ್ಲಿ ಭೀಕರ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ.  
 
ಐಸಿಎಸ್ ಉಗ್ರರು ಬ್ರಿಟನ್‌ನ ಮಹಾನಗರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎನ್ನುವ ವರದಿಗಳು ಬಹಿರಂಗವಾಗಿವೆ. ದೇಶದ ಭದ್ರತೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಸಜ್ಜಿತ ಸ್ಥಿತಿಯಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ.
 
ಸಿರಿಯಾ ಮತ್ತು ಇರಾಕ್ ದೇಶಗಳಲ್ಲಿರುವ ಐಸಿಎಸ್ ಉಗ್ರರು ಮಹಾನಗರಗಳ ಮೇಲೆ ದಾಳಿ ಮಾಡಿ ಹಿಂಸಾಚಾರವನ್ನು ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳಿಗೆ ಐಸಿಎಸ್ ಉಗ್ರರು ಬೆದರಿಕೆಯಾಗಿದ್ದಾರೆ ಎಂದು ಹೇಳಿದ್ದಾರೆ.  
 
ಇಸ್ಲಾಮಿಕ್ ಉಗ್ರನೊಬ್ಬ 30 ಮಂದಿ ಬ್ರಿಟನ್ ನಾಗರಿಕರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿದ ಕ್ಯಾಮರೂನ್, ಕಳೆದ 2005ರ ನಂತರ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ