ಆಘಾತಕಾರಿ ವಿಡಿಯೋ: ತಂದೆಗೆ ಚುಂಬಿಸಿ ವಿದಾಯ ಹೇಳಿದ ಆತ್ಮಹತ್ಯಾ ಬಾಂಬರ್ ಬಾಲಕ

ಭಾನುವಾರ, 21 ಫೆಬ್ರವರಿ 2016 (16:47 IST)
ಸಂಪೂರ್ಣ ಜಗತ್ತಿಗೆ ಭೀತಿ ಹುಟ್ಟಿಸಿರುವ ಎಲ್ಲರ ನಿದ್ದೆಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಬೆಚ್ಚಿ ಬೀಳಿಸುವ ವಿಡಿಯೋಗಳನ್ನು ಬಿಡುಗಡೆ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಈಗ ಐಎಸ್ಐ ಬಿಡುಗಡೆ ಮಾಡಿರುವ ಹೊಸ ವಿಡಿಯೋ ಒಂದು ಅವರ ರಾಕ್ಷಸ ಮನಸ್ಥಿತಿಗೆ ಮತ್ತೊಂದು ದೃಷ್ಟಾಂತವೆನಿಸಿದೆ. 
 
ಅದೇನು ಅಂದರೆ ಸುಮಾರು 11 ವರ್ಷದ ಬಾಲಕ ಅಬು ಇಮರಾ ಅಲ್-ಒಮ್ರಿ ಸ್ಪೋಟಕ ಸಾಮಗ್ರಿಗಳು ತುಂಬಿದ್ದ ಟ್ರಕ್‌ ಜತೆಗೆ ತನ್ನನ್ನು ಉಡಾಯಿಸಿಕೊಳ್ಳುವ ಮುನ್ನ ತಂದೆಯನ್ನು ಚುಂಬಿಸಿ ವಿದಾಯ ಹೇಳಿ ಆತನಿಂದ ಅಂತಿಮ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾನೆ. 
 
ಈ ವಿಡಿಯೋವನ್ನು ಕಳೆದ ತಿಂಗಳು ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ. 
 

ವೆಬ್ದುನಿಯಾವನ್ನು ಓದಿ