ಪ್ರತಿಭಾ ಲಾಭಕ್ಕಾಗಿ ವಾಪಸು: ಅಮೆರಿಕದ ಭಾರತೀಯ ವಿಜ್ಞಾನಿಗಳ ಚಿಂತನೆ

ಸೋಮವಾರ, 12 ಅಕ್ಟೋಬರ್ 2015 (17:29 IST)
ಪ್ರತಿಭಾಶಾಲಿಗಳು ದೇಶಕ್ಕೆ ಪುನಃ ವಾಪಸು ತರುವ ಮೂಲಕ ಪ್ರತಿಭಾ ಪಲಾಯನದಿಂದ ಪ್ರತಿಭಾ ಲಾಭಕ್ಕೆ ಉತ್ತೇಜನ ನೀಡುವ ಮಾರ್ಗಗಳನ್ನು ಕುರಿತು ಚರ್ಚಿಸಲು ಸುಮಾರು 50 ಯುವ ಭಾರತೀಯ ವಿಜ್ಞಾನಿಗಳು ಇಲ್ಲಿ ಒಟ್ಟಿಗೆ ಸೇರಿದ್ದರು.  ನಿಮ್ಮಲ್ಲಿ ಉತ್ತಮ ಯೋಜನೆಯಿದ್ದರೆ ಭಾರತದಲ್ಲಿ ಹಣಕ್ಕೆ ನಿರ್ಬಂಧವಿಲ್ಲ. ಎರಡನೆಯದಾಗಿ ಭಾರತದಲ್ಲಿ ಸಂಶೋಧನಾ ಅವಕಾಶಗಳು ಉತ್ತಮವಾಗಿದೆ. ವೈಜ್ಞಾನಿಕ ಸಂಶೋಧನೆಗೆ ವಾತಾವರಣವು ವಿಪುಲವಾಗಿ ಸುಧಾರಿಸಿದೆ ಎಂದು ಗುಂಟೂರಿನ ಮಲ್ಲಿಕಾರ್ಜುನಾ ರಾವ್ ಕೊಮಾರ್‌ನೆನಿ ತಿಳಿಸಿದರು. 
 
ಕೋಮಾರ್‌ನೆನಿ ಅಮೆರಿಕಕ್ಕೆ 2008ರಲ್ಲಿ ನಾರ್ತ್ ಡಕೋಟಾ ವಿವಿಯಲ್ಲಿ ಪಿಎಚ್‌ಡಿ ಸಲುವಾಗಿ ಆಗಮಿಸಿದ್ದರು. ಏಳು ವರ್ಷಗಳ ನಂತರ ಕೊಮಾರ್ನೆನಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿದ್ದು, ಅವರ ಹೆಸರಿನಲ್ಲಿ ಎರಡು ಪೇಟೆಂಟ್‌ಗಳಿವೆ. 
 
ಆದರೆ ಈಗ ಮೂಲ ಸಂಶೋಧನೆ ಸಲುವಾಗಿ ಭಾರತಕ್ಕೆ ಹಿಂತಿರುಗುವ ಅಪೇಕ್ಷೆ ಹೊಂದಿದ್ದಾರೆ.  ಕೊಮಾರೆನಿ ಮತ್ತು ಸಮಾನಮನಸ್ಕ ವಿಜ್ಞಾನಿಗಳು ವಾರಾಂತ್ಯದಲ್ಲಿ ಇಲ್ಲಿನ ಎಂಐಟಿಯ ಯಂಗ್ ಇನ್‌ವೆಸ್ಟಿಗೇಟರ್ಸ್ ಮೀಟಿಂಗ್‌ನಲ್ಲಿ ಭಾಗವಹಿಸಲು ನೆರೆದಿದ್ದರು. 
 
ಪ್ರತಿಭಾಪಲಾಯನವನ್ನು ಪ್ರತಿಭಾ ಲಾಭವಾಗಿ ಪರಿವರ್ತಿಸುವ ಪ್ರಯತ್ನ ಇದಾಗಿದೆ ಎಂದು ಯಂಗ್ ಇನ್‌ವೆಸ್ಟಿಗೇಟರ್ಸ್ ಸಭೆಯ ಅಧ್ಯಕ್ಷ ಮತ್ತು ನಿರ್ದೇಶಕ ಅಜಿತ್ ಕುಮಾರ್ ಪರಾಯಲ್ ಹೇಳಿದರು. 
 
ಈ ಪ್ರವತ್ತಿಯು ಹೆಚ್ಚುತ್ತಿದ್ದು ವೇಗ ಪಡೆಯುತ್ತಿದೆ ಎಂದು ಭಾರತ-ಬ್ರಿಟಿಷ್ ಜಂಟಿ ಸಹಯೋಗದ ಸಿಇಒ ಶಾಹಿದ್ ಜಮೀಲ್ ತಿಳಿಸಿದರು. ಹೆಚ್ಚೆಚ್ಚು ಭಾರತೀಯರು ಭಾರತಕ್ಕೆ ವಾಪಸಾಗುತ್ತಿದ್ದು ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಯ ವಾತಾವರಣದಲ್ಲಿ ವಿಪುಲ ಸುಧಾರಣೆ ಮತ್ತು ಅಮೆರಿಕದಲ್ಲಿ ಮೂಲ ವಿಜ್ಞಾನಕ್ಕೆ ಫಂಡಿಂಗ್ ಗಣನೀಯ ಕುಸಿತವಾಗಿರುವುದು ಇದಕ್ಕೆ ಕಾರಣವೆಂದು ಹೇಳಿದ್ದಾರೆ.
 
ಭಾರತ ಇಂದು ಅವಕಾಶಗಳ ನೆಲವಾಗಿದೆ. ನಮ್ಮ ದೇಶಕ್ಕೆ ವಾಪಸು ಬನ್ನಿ, ಪ್ರಧಾನಿ ನರೇಂದ್ರ ಮೋದಿ ಉಸ್ತುವಾರಿಯಲ್ಲಿ ಭಾರತ ಉತ್ತಮ ವೈಜ್ಞಾನಿಕ ಸಂಶೋಧನೆಗೆ ಉತ್ತೇಜನ ನೀಡುತ್ತಿದೆ ಎಂದು ಆಮಿಟಿ ವಿವಿಯ ಪ್ರಾಧ್ಯಾಪಕ ಗುರೀಂದರ್ ಸಿಂಗ್ ತಮ್ಮ ಪ್ರಾತ್ಯಕ್ಷಿಕೆಯಲ್ಲಿ ಯುವ ಸಂಶೋಧಕರಿಗೆ ಕರೆ ನೀಡಿದರು. 
 

ವೆಬ್ದುನಿಯಾವನ್ನು ಓದಿ