ಕಿರಿಕಿರಿ ಮಾಡುತ್ತಾರೆಂದು 38 ರೋಗಿಗಳ ಹತ್ಯೆಗೈದ ನರ್ಸ್..!

ಗುರುವಾರ, 27 ನವೆಂಬರ್ 2014 (09:29 IST)
ಕಾಯಿಲೆಯಿಂದ ನರಳುವ ರೋಗಿಗಳು ನರಳಾಡುವುದು ಸಾಮಾನ್ಯ ಸಂಗತಿ. ಆ ಸಮಯದಲ್ಲಿ ಅವರು ಬಯಸುವುದು ಸಾಂತ್ವನದ ಮಾತು ಮತ್ತು ಆತ್ಮೀಯ ಸ್ಪರ್ಶವಷ್ಟೇ. ಅವರಿಗೆ ಚಿಕಿತ್ಸೆ ನೀಡುವ ಡಾಕ್ಟರ್ ಮತ್ತು ನರ್ಸ್‌ಗಳು ಅವರಿಗೆ ದೇವರಿದ್ದಂತೆ. ಅವರಾಡುವ ಧೈರ್ಯದ ಮಾತುಗಳೇ ಅರ್ಧದಷ್ಟು ರೋಗಿಗಳನ್ನು ಗುಣಮುಖರನ್ನಾಗಿಸುತ್ತದೆ. ನಿದ್ದೆ, ಊಟವನ್ನು ಲೆಕ್ಕಿಸದೇ ರೋಗಿಗಳ ಸೇವೆ ಮಾಡುವ ನರ್ಸ್‌ಗಳು ನಿಜಕ್ಕೂ ಗ್ರೇಟ್. ಆದರೆ ಅಂತಹ ನರ್ಸ್ ದೇವರಾಗುವ ಬದಲು ಸಾವಾಗಿ ಕಾಡಿದರೆ....? ಹೌದು ಇದು ನಡೆದಿದ್ದು ಇಟಲಿಯಲ್ಲಿ...
ನರ್ಸ್  ಒಬ್ಬಳು ಕಿರಿಕಿರಿ ಮಾಡುತ್ತಾರೆಂಬ ಕಾರಣಕ್ಕೆ ಬರೊಬ್ಬರಿ 38 ರೋಗಿಗಗಳನ್ನ ಕೊಂದಿರುವ ಘಟನೆ ಇಟಲಿಯಲ್ಲಿ ನಡೆದಿದೆ.
 
ಅಷ್ಟೇ ಅಲ್ಲ, ಕೊಲೆ ಮಾಡಿದ ಬಳಿಕ ಆ  ನರ್ಸ್ ಶವಗಳ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದಳು. ಡ್ಯಾನಿಯಾಲಾ ಪೊಗ್ಯಾಲಿ ( 42) ಎಂಬ ನರ್ಸ್ ಈ ಪೈಶಾಚಿಕ ಆನಂದ ಪಡೆಯುತ್ತಿದ್ದ ವಿಕ್ಷಿಪ್ತ ಮನಸ್ಸಿನ ನರ್ಸ್.  
 
ಲುಗೋ ಪಟ್ಟಣದ ಆಕೆಯನ್ನು ಅನ್ನ ಕಳೆದ ಅಕ್ಟೋಬರ್ ತಿಂಗಳಲ್ಲಿ ಬಂಧಿಸಲಾಗಿದೆ.
 
ರೋಗಿಗಳ ನರಳಾಟದಿಂದ ಕಿರಿಕಿರಿ ಫೀಲ್ ಮಾಡುತ್ತಿದ್ದ ಆಕೆ ಅಂತವರನ್ನು ಸಾಯಿಸಲು  ಪೊಟ್ಯಾಶಿಯಂ ಬಳಸುತ್ತಿದ್ದಳು ಎಂಬ ಆತಂಕಕಾರಿ ವಿಷಯ ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿದ್ದಿದೆ.

ವೆಬ್ದುನಿಯಾವನ್ನು ಓದಿ