ಇಟಲಿ ಪೋರ್ನ್ ಸ್ಟಾರ್ ರೊಕೊ ಸಿಫ್ರೆದಿಯಿಂದ ಪೋರ್ನ್ ವಿಶ್ವವಿದ್ಯಾಲಯ ಉದ್ಘಾಟನೆ

ಶನಿವಾರ, 10 ಅಕ್ಟೋಬರ್ 2015 (18:38 IST)
ಇಟಲಿಯ ಪೋರ್ನ್ ಸ್ಟಾರ್ ರೊಕೊ ಸಿಫ್ರೆದಿ ಪೋರ್ನ್ ವಿಶ್ವವಿದ್ಯಾಲಯ ಆರಂಭಿಸುತ್ತಿದ್ದು, ಉದಯೋನ್ಮುಖ ನಟ ನಟಿಯರಿಗೆ ತರಬೇತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಪೋರ್ನ್ ಸ್ಟಾರ್ ರೊಕೊ ಸಿಫ್ರೆದಿ ಎರಡು ವಾರಗಳ ವಿಶೇಷ ತರಬೇತಿ ಕೋರ್ಸ್ ನಡೆಸಲಿದ್ದಾರೆ ಎಂದು ರೊಕೊ ವಕ್ತಾರರು ತಿಳಿಸಿದ್ದಾರೆ. ಅಶ್ಲೀಲ ಚಿತ್ರಗಳ ಖ್ಯಾತ ನಟರಾದ ರೊಕೊ, ಅಡಲ್ಟ್ ವಿಡಿಯೋ ನ್ಯೂಯ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ ಎನ್ನಲಾಗಿದೆ.  
 
ರೊಕೊ ಸಿಫ್ರೆದಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪೋರ್ನ್ ಚಿತ್ರಗಳ ನಟನೆಯ ಅನುಭವವನ್ನು ಉದಯೋನ್ಮುಖ ನಟ ನಟಿಯರೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ. ಒಂದು ವೇಳೆ ವೃತ್ತಿಯನ್ನು ನೀವು ಗಂಭೀರವಾಗಿ ತೆಗೆದುಕೊಳ್ಳದಿದ್ದಲ್ಲಿ ಪೋರ್ನ್ ಸ್ಟಾರ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 
ರೊಕೊ ಸಿಫ್ರೆದಿ, ಇಲ್ಲಿಯವರೆಗೆ ಸುಮಾರು 1300 ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದು, ರಿಯಲ್ಟಿ ಟೆಲಿವಿಜನ್ ಧಾರವಾಹಿಗಳನ್ನು ಮಾಡಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ