ಟಾಯ್ಲೆಟ್ ಗಬ್ಬೆಬ್ಬಿಸಿರುವುದನ್ನು ತಾಳದೆ ಪತಿಯನ್ನು ಚಾಕುವಿನಿಂದ ಇರಿದ ಪತ್ನಿ

ಶನಿವಾರ, 18 ಏಪ್ರಿಲ್ 2015 (15:33 IST)
ಟಾಯ್ಲೆಟ್ ಗಬ್ಬೆಬ್ಬಿಸಿ ಬಂದಿದ್ದರಿಂದ ಆಕ್ರೋಶಗೊಂಡ ಜಪಾನ್‌ ಮೂಲದ ಪತ್ನಿ, ತನ್ನ ಪತಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ ಘಟನೆ ವರದಿಯಾಗಿದೆ.

29 ವರ್ಷ ವಯಸ್ಸಿನ ಎಮಿ ಮಾಮಿಯಾ, ಪತಿಯ ಮುಖ ಮತ್ತು ಇತರ ಭಾಗಗಳಲ್ಲಿ ಚಾಕುವಿನಿಂದ ಇರಿದಿದ್ದರಿಂದ ಆಕೆಯ ಮೇಲೆ ಹತ್ಯಾ ಪ್ರಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಟಾಯ್ಲೆಟ್‌ ಗಬ್ಬೆಬ್ಬಿಸಿದ್ದಲ್ಲದೇ ಕೈಯನ್ನು ತೊಳೆದುಕೊಳ್ಳದೇ 3 ವರ್ಷದ ಮಗುವಿಗೆ ನೆರವಾಗಲು ಪ್ರಯತ್ನಿಸುತ್ತಿದ್ದ ಪತಿಯ ವರ್ತನೆಯಿಂದ ಕೋಪಗೊಂಡು ಆತನ ಮೇಲೆ ಹಲ್ಲೆ ನಡೆಸಿರುವುದಾಗಿ ಮಾಧ್ಯಮಗಳಿಗೆ ಮಾಮಿಯಾ ಮಾಹಿತಿ ನೀಡಿದ್ದಾಳೆ.

ವೆಬ್ದುನಿಯಾವನ್ನು ಓದಿ