ಜೆಟ್ ಏರ್‌ವೇಸ್‌ನಲ್ಲಿ ತಾಂತ್ರಿಕ ದೋಷ: ಪ್ರಯಾಣಿಕರು ಸುರಕ್ಷಿತವಾಗಿ ಪಾರು

ಶುಕ್ರವಾರ, 4 ಮಾರ್ಚ್ 2016 (14:33 IST)
ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ 120 ಮಂದಿ ಪ್ರಯಾಣಿಕರು ಮತ್ತು 8 ಸಿಬ್ಬಂದಿಯಿದ್ದ ಜೆಟ್ ಏರ್‌ವೇಸ್ ಫ್ಲೈಟ್ ಸಂಖ್ಯೆ 9ಡಬ್ಯು354 ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಕ್ಕಿಳಿಸಲಾಯಿತು ಎಂದು ಏರ್‌ಲೈನ್ ಮೂಲಗಳು ಹೇಳಿವೆ.  ವಿಮಾನ ರನ್‌ವೇನಲ್ಲಿ ಲ್ಯಾಂಡಿಂಗ್ ಆಗಿ ಚಲಿಸುತ್ತಿದ್ದಾಗ ಈ ದೋಷ ಕಾಣಿಸಿಕೊಂಡಿತೆಂದು ಮೂಲಗಳು ಹೇಳಿವೆ.
 
ವಿಮಾನವು ಪಾರ್ಕಿಂಗ್ ಸ್ಥಳದತ್ತ ಓಡುವಾಗ ಹೈಡ್ರಾಲಿಕ್ ವೈಫಲ್ಯ ಉಂಟಾಯಿತೆಂದು ಜೆಟ್ ಏರ್‌ವೇಸ್ ವಕ್ತಾರ ತಿಳಿಸಿದರು. ಹೈಡ್ರಾಲಿಕ್ ವ್ಯವಸ್ಥೆಯು ವಿಮಾನದ ಚಲನವಲನವನ್ನು ನಿಯಂತ್ರಿಸುತ್ತದೆ.
 
ಜೆಟ್ ಏರ್‌ವೇಸ್ ಇಂಜಿನಿಯರಿಂಗ್ ತಂಡ ಆರಂಭಿಕ ಪರಿಶೀಲನೆ ಮಾಡಿದಾಗ, ಮುಖ್ಯ ಲ್ಯಾಂಡಿಂಗ್ ಗೇರ್ ಹಾನಿಯಾಗಿರುವುದು ಪತ್ತೆಯಾಯಿತು. ವಿಮಾನದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲವೆಂದು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಜೆಟ್ ಏರ್‌ವೇಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ