ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಜೋನ್ ಲಾರರ್ ನಿಗೂಢ ಸಾವು

ಗುರುವಾರ, 21 ಏಪ್ರಿಲ್ 2016 (16:03 IST)
ಡಬ್ಲ್ಯುಡಬ್ಲ್ಯುಇ ಕುಸ್ತಿಯಲ್ಲಿ ಚೈನಾ ಎಂಬ ಹೆಸರಿನಿಂದ ಪರಿಚಿತಳಾಗಿದ್ದ ಪ್ರಖ್ಯಾತ ಕುಸ್ತಿಪಟು ಜೋನ್ ಲಾರರ್ ಕ್ಯಾಲಿಫೋರ್ನಿಯಾ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು ಕಂಡುಬಂದಿದೆ. 
 
1997ರಲ್ಲಿ ವರ್ಲ್ಡ್ ವ್ರೆಸ್ಲಿಂಗ್ ಫೆಡರೇಷನ್ ಎಂದು ಹೆಸರಾಗಿದ್ದ ಡಬ್ಲ್ಯುಡಬ್ಲ್ಯುಇಗೆ ಚೈನಾ ಪ್ರವೇಶಿಸಿ, ಪಾಲ್ ಮೈಕೇಲ್ ಲೆವೆಸ್ಕ್ಯೂ ಜತೆ ಅಪಾಯಕಾರಿ ಜೋಡಿ  ಮಾಡಿಕೊಂಡಿದ್ದಕ್ಕಾಗಿ ನೆನಪಿಗೆ ಬರುತ್ತಾರೆ.
 
2001ರಲ್ಲಿ 231 ದಿನಗಳ ಕಾಲ ಮಹಿಳಾ ಚಾಂಪಿಯನ್ ಪಟ್ಟವನ್ನು ಹೊಂದಿದ್ದರು. ಅಂತರಖಂಡೀಯ ಚಾಂಪಿಯನ್‌ಷಿಪ್ ಗೆದ್ದು ಇತಿಹಾಸ ನಿರ್ಮಿಸಿದ ಏಕಮಾತ್ರ ಮಹಿಳೆ ಎಂದು ಖ್ಯಾತರಾಗಿದ್ದರು. ಡಬ್ಲ್ಯುಡಬ್ಲ್ಯುಇನಲ್ಲಿ ವೃತ್ತಿಜೀವನದ ಬಳಿಕ ಚೈನಾ ರೂಪದರ್ಶಿ ಮತ್ತು ಬಾಡಿಬಿಲ್ಡರ್ ವೃತ್ತಿಗೆ ಇಳಿದರು. ತನ್ನ ಗೆಳೆಯನ ಜತೆ 2004ರಲ್ಲೆ ಸೆಕ್ಸ್‌ಟೇಪ್‌‍ವೊಂದನ್ನು ತಯಾರಿಸಿ ಹರಿಯ ಬಿಟ್ಟಿದ್ದಲ್ಲದೇ ಪೋರ್ನ್ ನಟಿಯಾಗಿ ಸಂಕ್ಷಿಪ್ತ ವೃತ್ತಿಜೀವನ ಮಾಡಿದ್ದರು. 
ತಾಜಾಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

 

ವೆಬ್ದುನಿಯಾವನ್ನು ಓದಿ