ಗುಂಡು ಮುಖಕ್ಕೆ ತಾಗಿದ್ದರೂ ನೇರ ಪ್ರಸಾರ ಮಾಡಿದ ಪತ್ರಕರ್ತೆ

ಸೋಮವಾರ, 5 ಅಕ್ಟೋಬರ್ 2015 (14:12 IST)
ಪೂರ್ವ ಜೆರುಸಲೆಂನಲ್ಲಿ ಸ್ಟನ್ ಗ್ರೆನೇಡ್‌ನಿಂದ ಮುಖಕ್ಕೆ ಗುಂಡು ತಾಗಿದ ಪತ್ರಕರ್ತೆಯೊಬ್ಬರು ಘಟನೆ ನಡೆದ ಕೂಡಲೇ ವರದಿ ಮಾಡಲು ತೆರಳಿದ ಘಟನೆ ಸಂಭವಿಸಿದೆ. ಹನಾ ಮಹಮೈಡ್ ರಾಮಲ್ಲಾ ಹೊರಗೆ ಬೇತ್ ಎಲ್ ಶಿಬಿರದ ಬಳಿ ಘರ್ಷಣೆಗಳನ್ನು ಕುರಿತು ವರದಿ ಮಾಡುತ್ತಿದ್ದಳು.

ಈ ಸಂದರ್ಭದಲ್ಲಿ ಇಸ್ರೇಲಿನ ಆಕ್ರಮಣ ಪಡೆಗಳು ಸ್ಟನ್ ಗ್ರೆನೇಡ್‌ಗಳು ಮತ್ತು ಅಶ್ರುವಾಯುಗಳಿಂದ ಪ್ಯಾಲೇಸ್ಟೀನ್ ಪತ್ರಕರ್ತರ ಮೇಲೆ ಗುರಿ ಇರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಟನ್ ಗ್ರೇನೇಡ್ ಗುಂಡು ಮಹಮೇಡ್‌ ಮುಖಕ್ಕೆ ತಾಗಿ ಗಾಯವಾಗಿತ್ತು.  
 
ವಿಡಿಯೊದಲ್ಲಿ ಮಹಮೇಡ್ ಅಲ್ - ಮಯಾದೀನ್‌ಗೆ ನೇರ ಪ್ರಸಾರದಲ್ಲಿ ಅವಳ ಮುಖವು ಬ್ಯಾಂಡೇಜ್‌ನಿಂದ ಪೂರ್ಣ ಮುಚ್ಚಿದ್ದರೂ ವರದಿ ಮಾಡುತ್ತಿರುವುದನ್ನು ತೋರಿಸಿದೆ. 

ವೆಬ್ದುನಿಯಾವನ್ನು ಓದಿ