ಒಬಾಮಾ ಪುತ್ರಿಯನ್ನು ಮದುವೆಯಾಗಲು ಹಸು,ಕುರಿ, ಮೇಕೆಗಳ ವಧುದಕ್ಷಿಣೆ ಆಫರ್!

ಗುರುವಾರ, 28 ಮೇ 2015 (11:25 IST)
ಕೀನ್ಯಾದ ವಕೀಲನೊಬ್ಬ ಮದುವೆಯಾಗಬೇಕೆಂದು ಬಯಸಿ ಅತಿ ವಿಶೇಷ ಕನ್ಯೆಯ ಮೇಲೆ ಕಣ್ಣಿಟ್ಟಿದ್ದಾನೆ. ಅವರು ಯಾರು ಎನ್ನುತ್ತೀರಾ? ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಹಿರಿಯ ಪುತ್ರಿ ಮಾಲಿಯಾ (16). 
ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿಯನ್ನು ತನಗೆ ಮದುವೆ ಮಾಡಿಕೊಡಲೊಪ್ಪಿದರೆ ತಾನು ವಧು ದಕ್ಷಿಣೆ ನೀಡುತ್ತೇನೆ ಎಂದು ಆತ ಹೇಳಿಕೊಂಡಿದ್ದಾನೆ. ಅಷ್ಟಕ್ಕೂ ಆತ ನೀಡುತ್ತೇನೆಂದ ವಧುದಕ್ಷಿಣೆ ಏನು ಗೊತ್ತಾ? ಹಸು,ಕುರಿ, ಮೇಕೆ 
 
ನೈರೋಬಿಯನ್ ಪತ್ರಿಕೆ ಒಂದಕ್ಕೆ ಸಂದರ್ಶನ ನೀಡಿರುವ ವಕೀಲ ಫೆಲಿಕ್ಸ್ ಕಿಪ್ರೋನೋ 2008ರಲ್ಲಿ ಒಬಾಮಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗ ಮೊದಲ ಬಾರಿ ಅವರ ಹಿರಿಯ ಪುತ್ರಿ ಮಾಲಿಯಾಳನ್ನು ನೋಡಿದ್ದೆ. ಆಗಿನಿಂದ ನನಗೆ ಅವಳ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಅವಳನ್ನು ನನಗೆ ಮದುವೆ ಮಾಡಿಕೊಟ್ಟರೆ ವಧುದಕ್ಷಿಣೆ ರೂಪದಲ್ಲಿ 50 ಹಸು, 70 ಕುರಿ ಹಾಗೂ 30 ಮೇಕೆಗಳನ್ನು ವಧುದಕ್ಷಿಣೆಯಾಗಿ ಕೊಡುವುದಾಗಿ ಆತ ಹೇಳಿದ್ದಾನೆ. 
 
ಆಕೆ ತನ್ನ ಜತೆ ಡೇಟಿಂಗ್ ನಡೆಸಲು ಒಪ್ಪಿದರೆ ಪ್ರಾಮಾಣಿಕವಾಗಿ ಸಂಸಾರ ಮಾಡಿಕೊಂಡು ಹೋಗುತ್ತೇನೆಂದು ಈತ ತಿಳಿಸಿದ್ದಾನೆ.
 
"ಜುಲೈನಲ್ಲಿ ಒಬಾಮಾ ಕೀನ್ಯಾ ಪ್ರವಾಸ ಕೈಗೊಳ್ಳಲಿದ್ದು ಆ ಸಂದರ್ಭದಲ್ಲಿ ಮದುವೆಯ ಪ್ರಸ್ತಾಪವಿಡುತ್ತೇನೆ. ಆ ಸಂದರ್ಭದಲ್ಲಿ ಅವರು ಮಾಲಿಯಾಳನ್ನು ಕರೆದುಕೊಂಡು ಬರಲಿ ಎಂಬುದು ನನ್ನ  ಬಯಕೆ. ಒಬಾಮಾರವರು ಇದಕ್ಕೊಪಿದರೆ ಅವರು ಮದುವೆಗೆ ಒಪ್ಪಿದರೆ ನೇರವಾಗಿ ಮಾಲಿಯಾಳಿಗೆ ಪ್ರಪೋಸ್ ಮಾಡುತ್ತೇನೆ. ಅದಕ್ಕವಳು ಒಪ್ಪಿದರೆ ನನ್ನ ಬದುಕು ಸಾರ್ಥಕ. ನಾನವಳಿಗೆ ಹಾಲು ಕರೆಯುವ, ಮೇಕೆ ಸಾಕುವ ಬಗ್ಗೆ ಹೇಳಿಕೊಡುತ್ತೇನೆ", ಎಂದು ಕಿಪ್ರೋನೋ ಹೇಳಿದ್ದಾನೆ. ವಿಚಿತ್ರವೆಂದರೆ ಈ ಬಯಕೆಗೆ ಆತನ ಕುಟುಂಬ ಸಹ ಬೆಂಬಲ ವ್ಯಕ್ತಪಡಿಸಿದೆ. 
 
ಅಷ್ಟಕ್ಕೂ ಆತ ಹಸು, ಕುರಿಗಳನ್ನು ಕೊಡುತ್ತೇನೆಂದು ಹೇಳುತ್ತಿರುವುದಕ್ಕೂ ಒಂದು ಹಿನ್ನೆಲೆಯಿದೆ. ಅಮೆರಿಕ ಅಧ್ಯಕ್ಷ ಒಬಾಮಾ  ಕೀನ್ಯಾದ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಈ ಸಮುದಾಯದಲ್ಲಿ ಈಗಲೂ ವಧು ದಕ್ಷಿಣೆ ರೂಪದಲ್ಲಿ ಹಸು-ಕರು, ಕುರಿಗಳನ್ನು ನೀಡುವ ಸಂಪ್ರದಾಯವಿದೆ.
 
ಆತ ಪ್ರೀತಿಸುತ್ತಿರುವ ಮಾಲಿಯಾಳಿಗೆ ಇನ್ನೂ 15ರ ಪ್ರಾಯ. ಆದರೆ ಕಿಪ್ರೋನೋಗೆ ಎಷ್ಟು ವಯಸ್ಸು ಎಂಬುದು ತಿಳಿದು ಬಂದಿಲ್ಲ. 

ವೆಬ್ದುನಿಯಾವನ್ನು ಓದಿ