ಉತ್ತರ ಕೊರಿಯಾದಲ್ಲಿ ಮದುವೆ, ಅಂತ್ಯ ಸಂಸ್ಕಾರ ನಿಷೇಧ

ಮಂಗಳವಾರ, 3 ಮೇ 2016 (17:40 IST)
ಆಗಾಗ ವಿಲಕ್ಷಣ ಆದೇಶಗಳನ್ನು ಹೊರಡಿಸುವ ಮೂಲಕ ದೇಶವಾಸಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಈಗ ಹೊಸದೊಂದು ಆದೇಶ ಹೊರಡಿಸಿದ್ದಾರೆ. 

ಉತ್ತರ ಕೊರಿಯಾದಲ್ಲಿ ಇನ್ನೊಂದು ವಾರಗಳ ಕಾಲ ಯಾರೂ ವಿವಾಹ ಮತ್ತು ಶವಗಳ ಅಂತಿಮ ಸಂಸ್ಕಾರ ಮಾಡಬಾರದು ಎಂದಾತವಿಚಿತ್ರ ಫರ್ಮಾನು ಜಾರಿ ಮಾಡಿದ್ದಾನೆ.
 
ಮುಂದಿನವಾರ ಕಿಮ್ ಜಾಂಗ್ ಉನ್ ಪಟ್ಟಾಭಿಷೇಕವಿದ್ದು, ಅದು ಸಂಪನ್ನವಾಗುವವರೆಗೂ ದೇಶದಲ್ಲಿ ಯಾರೂ ಕೂಡ ವಿವಾಹ ಸಮಾರಂಭ ಮತ್ತು ಅಂತ್ಯ ಸಂಸ್ಕಾರಗಳ್ನು ನಡೆಸುವಂತಿಲ್ಲ. ಈ ವಿಚಿತ್ರ ಆಜ್ಞೆಯಿಂದ ಉತ್ತರ ಕೊರಿಯಾದ ಜನತೆ ಕಂಗಾಲಾಗಿದ್ದು, ಶವಗಳನ್ನು ಏನು ಮಾಡಬೇಕು ಎಂಬ ಚಿಂತೆ ಅವರನ್ನು ಕಾಡುತ್ತಿದೆ.
 
ಪಟ್ಟಾಭಿಷೇಕಕ್ಕೆ ಒದಗಿಸಲಾಗುತ್ತಿರುವ ಭದ್ರತೆಗೆ ಚ್ಯುತಿ ಬರಬಾರದೆಂಬ ಕಾರಣಕ್ಕೆ ಆತ ಈ ವಿಚಿತ್ರ ಆದೇಶ ಹೊರಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.
 
ಈ ಹಿಂದೆ ಆತ ಉದ್ದ ಕೂದಲು ಹೊಂದಿರುವ ಪುರುಷರನ್ನು ಗಮನದಲ್ಲಿರಿಸಿಕೊಂಡು ತನ್ನದೇ ಕೇಶ ಶೈಲಿಯನ್ನು ಎಲ್ಲರೂ ಅನುಕರಿಸುವಂತೆ ಆದೇಶಿಸಿದ್ದ. ಪುರುಷರಿಗೆ 2 ಸೆಂ.ಮೀ ಕೂದಲು ಬಿಡಲು ಸೂಚಿಸಲಾಗಿತ್ತು. ತನ್ನ ಗೌರವಾರ್ಥವಾಗಿ ತನ್ನಂತೆಯೆ ಕಿವಿ ಪಕ್ಕ ಕೂದಲನ್ನು ಬೋಳಿಸಿ, ಕೂದಲನ್ನು ಎತ್ತರಕ್ಕೆ ಬಾಚಲು ತಾಕೀತು ಮಾಡಿದ್ದ. 

ವೆಬ್ದುನಿಯಾವನ್ನು ಓದಿ