ಇಮಾಮ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕಿರ್ಗಿಸ್ತಾನ್

ಗುರುವಾರ, 8 ಅಕ್ಟೋಬರ್ 2015 (13:45 IST)
ಉಗ್ರವಾದದ ಆರೋಪಗಳು ಮತ್ತು ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಮೇಲೆ ಕಿರ್ಗಿಸ್ತಾನವು ಪ್ರಮುಖ ಇಮಾಮ್‌ಗೆ ಐದು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪ ಮತ್ತು ಉಗ್ರವಾದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಿತರಣೆ ಮಾಡಿದ ಆರೋಪದ ಮೇಲೆ ಇಮಾಮ್ ರಷೋತ್ ಕಮಲೋವ್ ಅವರಿಗೆ ಕರಾ ಸು ಪಟ್ಟಣದ ಪ್ರಾದೇಶಿಕ ಕೋರ್ಟ್ ಶಿಕ್ಷೆ ವಿಧಿಸಿದೆ. 
 
ಕಮಲೋಮ್ ಅಮಾಯಕರು ಎಂದು ಅವರ ಬೆಂಬಲಿಗರು ಹೇಳಿದ್ದು, ಸರ್ಕಾರವನ್ನು ಆಗಾಗ್ಗೆ ಟೀಕಿಸುತ್ತಿದ್ದ ಅವರ ಉಪನ್ಯಾಸಗಳಿಂದ ಅವರನ್ನು ಗುರಿಮಾಡಿದೆ ಎಂದು ಆರೋಪಿಸಿದ್ದಾರೆ.
 
ಕಳೆದ ವರ್ಷದ ಉಪನ್ಯಾಸದಲ್ಲಿ  ಅವರ ಕಲಿಫೇಟ್ ಉಲ್ಲೇಖವನ್ನು ಪ್ರಾಸಿಕ್ಯೂಷನ್‌ ತಪ್ಪಾಗಿ ಗ್ರಹಿಸಿದೆ ಎಂದು ಅವರ ವಕೀಲರು ವಾದ ಮಂಡಿಸಿದ್ದಾರೆ.  ಕಮಲೋವ್ ಅವರ ಕಾನೂನು ತಂಡವು ಬುಧವಾರದ ಶಿಕ್ಷೆಯ ವಿರುದ್ಧ ಅಪೀಲು ಸಲ್ಲಿಸಲಿದೆ. 

ವೆಬ್ದುನಿಯಾವನ್ನು ಓದಿ