ಲಾಡೆನ್‌ ಐಎಸ್‌ಐ ಬಂಧನಲ್ಲಿದ್ದ, ಅಮೆರಿಕದಿಂದ ದಾಳಿ ಕಟ್ಟುಕಥೆ

ಬುಧವಾರ, 17 ಜೂನ್ 2015 (21:01 IST)
ಪಾಕಿಸ್ತಾನದ ಐಎಸ್‌ಐ ಅಲ್ ಕೈದಾ ಮುಖಂಡ ಒಸಾಮಾ ಬಿನ್ ಲಾಡೆನ್‌ನನ್ನು ಅಬೋಟಾಬಾದ್‌ನಲ್ಲಿ ಕೈದಿಯಾಗಿ ಸುಮಾರು 6 ವರ್ಷಗಳ ಕಾಲ ಬಂಧಿಸಿತ್ತು ಮತ್ತು ನಾಟಕೀಯ ದಾಳಿ ಮಾಡುವುದಕ್ಕಾಗಿ ಒಸಾಮಾನನ್ನು ಅಮೆರಿಕದ ಕೈಗೆ ಹಸ್ತಾಂತರಿಸಿತು ಎಂದು ಒಸಾಮಾ ಸಾವಿನ  ಹೊಸ ವಿವಾದಾತ್ಮಕ ಸನ್ನಿವೇಶವನ್ನು ಮಾಧ್ಯಮದ ವರದಿಯೊಂದು ತಿಳಿಸಿದೆ. 
 
 
ಪುಲಿಟ್ಜರ್ ಪ್ರಶಸ್ತಿ ವಿಜೇತ ಅಮೆರಿಕದ ತನಿಖಾ ಪತ್ರಕರ್ತ ಸೇಮರ್ ಹರ್ಷ್ ಅಮೆರಿಕದ ದಾಳಿ ಮತ್ತು ಒಸಾಮಾ ಹತ್ಯೆಯನ್ನು ಕಟ್ಟು ಕತೆ ಎಂದು ತಳ್ಳಿಹಾಕಿದ್ದಾರೆ. ಅಲ್ ಕೈದಾ ಮತ್ತು ಒಸಾಮಾನನ್ನು ಸುಮಾರು 2 ದಶಕಗಳ ಕಾಲ ತನಿಖೆ ಮಾಡಿದ ಜೇನ್ ಕಾರ್ಬನ್ ತನ್ನ ಬಿಬಿಸಿ ವರದಿಯಲ್ಲಿ ಒಸಾಮಾನನ್ನು ಹತ್ಯೆ ಮಾಡಲು ಅಮೆರಿಕ ಮತ್ತು ಪಾಕಿಸ್ತಾನ ಸರ್ಕಾರ ಅಧಿಕ ಮಟ್ಟದಲ್ಲಿ ಪಿತೂರಿ ನಡೆಸಿದೆ ಎಂದು ಪ್ರತಿಪಾದಿಸಿದ್ದರು. 
 
 ಕಾರ್ಬಿನ್ ಜೊತೆ ಮಾತನಾಡಿದ ಹರ್ಷ್ ಹೇಳಿಕೆಯನ್ನು ಉದಾಹರಿಸಿ, ಐಎಸ್‌ಐ ಒಸಾಮಾನನನ್ನು ಸುಮಾರು 6 ವರ್ಷಗಳ ಕಾಲ ಗ್ಯಾರಿಸನ್ ಪಟ್ಟಣದಲ್ಲಿ ಕೈದಿಯಾಗಿ ಬಂಧಿಸಿತ್ತು ಮತ್ತು ಹುಸಿ ದಾಳಿ ನಡೆಸುವುದಕ್ಕಾಗಿ ಅಮೆರಿಕ ಸೈನ್ಯಕ್ಕೆ ಹಸ್ತಾಂತರಿಸಿತು ಎಂದು ವರದಿ ತಿಳಿಸಿದೆ. 
 
 ಪಾಕಿಸ್ತಾನದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಸಿಐಎಗೆ 25 ದಶಲಕ್ಷ ಡಾಲರ್‌ ಬಹುಮಾನಕ್ಕೆ  ಪ್ರತಿಯಾಗಿ ಒಸಾಮಾ ಅಡಗುತಾಣವನ್ನು ಬಹಿರಂಗ ಮಾಡಿದರೆಂದು ಹರ್ಷ್ ತಿಳಿಸಿದ್ದಾರೆ. ಓಸಾಮಾ ಇದ್ದ ಸ್ಥಳದ ಬಗ್ಗೆ ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸೇವೆಯ ಮೇಲಿನ ಸ್ತರಕ್ಕೆ ಚೆನ್ನಾಗಿ ತಿಳಿದಿತ್ತು ಎಂದು ಹರ್ಷ್ ಹೇಳಿದ್ದಾರೆ. ಆದರೆ ಈ ಅಭಿಪ್ರಾಯವನ್ನು ಸಿಐಎ ಅಲ್ಲಗಳೆದಿದ್ದು, ಪಾಕಿಸ್ತಾನಕ್ಕೆ ಉನ್ನತ ಸೇನಾವರ್ಗಕ್ಕೆ ಒಸಾಮಾ  ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದೆ. 

ವೆಬ್ದುನಿಯಾವನ್ನು ಓದಿ