ಜಗತ್ತಿನಲ್ಲೇ ಅತಿ ದೊಡ್ಡ ಬ್ಯಾಕ್ಟಿರಿಯಾ ಪತ್ತೆ: ಬರಿಕಣ್ಣಿಗೂ ಕಾಣುತ್ತೆ!

ಶುಕ್ರವಾರ, 24 ಜೂನ್ 2022 (14:13 IST)

ಬ್ಯಾಕ್ಟಿರಿಯಾ ಅಂದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತದೆ. ಕೆಲವು ಬ್ಯಾಕ್ಟಿರಿಯಾ ಕಾಯಿಲೆಗಳಿಗೆ ಕಾರಣವಾದರೆ, ಇನ್ನು ಕೆಲವು ಆರೋಗ್ಯಕಾರಿ. ಆದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುವ ಬ್ಯಾಕ್ಟಿರಿಯಾ ಇದೇ ಮೊದಲ ಬಾರಿಗೆ ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿರುವುದು ಪತ್ತೆಯಾಗಿದೆ.

ಹೌದು, ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ದೊಡ್ಡ ಬ್ಯಾಕ್ಟಿರಿಯಾ ಪತ್ತೆಯಾಗಿದೆ. ಕೆರೆಬಿಯನ್‌ ನಾಡಿನಲ್ಲಿ ಅಂದರೆ ವೆಸ್ಟ್‌ ಇಂಡೀಸ್‌ ನಲ್ಲಿ ಪತ್ತೆಯಾಗಿರುವ ಬ್ಯಾಕ್ಟಿರಿಯಾ ಬರೀ ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿದೆ.

ಸಾಮಾನ್ಯವಾಗಿ ಬ್ಯಾಕ್ಟಿರಿಯಾಗಳು 1-5 ಮೈಕ್ರೊ ಮೀಟರ್‌ ಉದ್ದವಿರುತ್ತದೆ. ಇದನ್ನು ಮೈಕ್ರೊಸ್ಕೋಪ್‌ ನಲ್ಲಿ ಅಂದರೆ ದುರ್ಬಿನು ಇಟ್ಟು ನೋಡಿದರೆ ಮಾತ್ರ ಅದು ಕಾಣಿಸುತಿತ್ತು. ಆದರೆ ಇದೀಗ ಪತ್ತೆಯಾಗಿರುವ ಬ್ಯಾಕ್ಟಿರಿಯಾ 10,000 ಮೈಕ್ರೊ ಮೀಟರ್‌ ಉದ್ದವಿದ್ದು, ಬರೀ ಕಣ್ಣಿಗೆ ಕಾಣುತ್ತಿದೆ.

ಥಿಯೊಮಾಗ್ರೆಟಿಯಾ ಮೆಗ್ನಿಫಿಸಿಯಾ ಎಂದು ಈ ಹೊಸ ಬ್ಯಾಕ್ಟಿರಿಯಾಗೆ ಹೆಸರಿಡಲಾಗಿದ್ದು, ಇದು ಸಾಮಾನ್ಯವಾದ ಬ್ಯಾಕ್ಟಿರಿಯಾಗಿಂತ 50 ಪಟ್ಟು ದೊಡ್ಡದಾಗಿದೆ. ಈ ಬ್ಯಾಕ್ಟಿರಿಯಾದ ಸೆಲ್‌ ಕೂಡ ಸಾಮಾನ್ಯ ಬ್ಯಾಕ್ಟಿರಿಯಾದ ಸೆಲ್‌ ಗಳಿಗಿಂತ 9000 ಪಟ್ಟು ದೊಡ್ಡದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ