ಪ್ಯಾರಿಸ್ ದಾಳಿಯನ್ನು ಫೇಸ್‌ಬುಕ್‌ನಲ್ಲಿ ಹೊಗಳಿದ ಇಂಗ್ಲೆಂಡ್ ಯುವಕನ ಬಂಧನ

ಮಂಗಳವಾರ, 17 ನವೆಂಬರ್ 2015 (20:46 IST)
ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ ಮೇಲೆ ಐಸಿಎಸ್ ಕುಖ್ಯಾತ ಉಗ್ರರು ನಡೆಸಿದ ದಾಳಿಯನ್ನು ಶ್ಲಾಘಿಸಿ, ಮುಂದಿನ ಗುರಿ ಮ್ಯಾಚೆಂಸ್ಟರ್ ಆಗಿರಬಹುದು ಎಂದು ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ್ದ ಯುಕೆ ಮೂಲದ 21 ವರ್ಷ ವಯಸ್ಸಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 
 
ಯುವಕ ಐಸಿಎಸ್ ಪರವಾಗಿ ಹಾಕಿದ ಸಂದೇಶ ಸುಮಾರು 45 ನಿಮಿಷಗಳ ಕಾಲ ಇಂಗ್ಲೆಂಡ್ ಜನತೆಯಲ್ಲಿ ಕೋಲಾಹಲ ಸೃಷ್ಟಿಸಿತ್ತು. ತದ ನಂತರ ಅದನ್ನು ತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ.
 
21 ವರ್ಷ ವಯಸ್ಸಿನ ಆರೋಪಿ ಟೊಡ್‌ಮೊರ್ಡೆನ್ ವೆಸ್ಟ್ ಯಾರ್ಕ್‌ಶೈರ್ ಮೂಲದವನಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ನನ್ನ ಸಹೋದರರು ಪ್ಯಾರಿಸ್‌ನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಉಗ್ರರ ದಾಳಿ, ಸಂಚು, ಯೋಜನೆ ರೂಪಿಸುವಲ್ಲಿ ನಾವು ಬುದ್ದಿವಂತರಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿದ್ದೇವೆ ಎಂದು ಯುವಕ ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ್ದಾನೆ.
 
ನಾವು ಐಸಿಎಸ್ ಉಗ್ರರು, ನಮ್ಮ ಶಕ್ತಿ, ಸಾಮರ್ಥವನ್ನು ಸಾಬೀತುಪಡಿಸಿದ್ದೇವೆ. ಮುಂದಿನ ಗುರಿ ಮ್ಯಾಂಚೆಸ್ಟರ್ ರಿಪ್ ಜಿಹಾದ್ ಜಾನ್ ಎಂದು ಸಂದೇಶದಲ್ಲಿ ತಿಳಿಸಿದ್ದಾನೆ.
 
ಫೇಸ್‌ಬುಕ್ ಬಳಕೆದಾರರು ಆಘಾತಕಾರಿ ಸಂದೇಶವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ಟೊಡ್‌ಮೊರ್ಡೆನ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ