ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಗುಪ್ತಾಂಗ ಕತ್ತರಿಸಿ ಹಾಕಿದ ಪತಿಮಹಾಶಯ

ಸೋಮವಾರ, 30 ಮಾರ್ಚ್ 2015 (13:14 IST)
ಮಾವನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ ಪತ್ನಿಯ ವರ್ತನೆಯಿಂದ ಆಕ್ರೋಶಗೊಂಡ ಪತಿ ಮಹಾಶಯ ಮಚ್ಚಿನಿಂದ ಆಕೆಯ ಗುಪ್ತಾಂಗ ಕತ್ತರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಮಾವನೊಂದಿಗೆ ಅನೈತಿಕ ಸಂಬಂಧ ಮುಂದುವರಿಸುವುದು ಬೇಡ ಎಂದು ಆರೋಪಿ ಪತಿ, ಪತ್ನಿಗೆ ಹಲವಾರು ಬಾರಿ ತಿಳಿಹೇಳಲು ಪ್ರಯತ್ನಿಸಿದ್ದನು. ಆದರೆ, ಆಕೆ ಆತನ ಸಲಹೆಗೆ ಕ್ಯಾರೆ ಎನ್ನದೆ ತನ್ನ ಸಂಬಂಧವನ್ನು ಮುಂದುವರಿಸಿದ್ದಳು.

ಪತ್ನಿಯ ವರ್ತನೆಯಿಂದ ಬೇಸತ್ತ ಪತಿ, ಮಚ್ಚಿನಿಂದ ಆಕೆಯ ಗುಪ್ತಾಂಗವನ್ನು ಕತ್ತರಿಸಿ ಹಾಕಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಮಹಿಳೆ ಘಟನೆಯ ಬಗ್ಗೆ ವಿವರಿಸಿ, ಆತ ಯಾವಾಗಲಾದರೂ ಮರಳಿ ಬರಬಹುದು. ನನ್ನ ಕತ್ತನ್ನು ಕತ್ತರಿಸಬಹುದು ಎನ್ನುವ ಆತಂಕ ಕಾಡುತ್ತಿದೆ. ಪ್ರತಿ ಬಾರಿ ಮೂತ್ರ ಮಾಡುವಾಗ ತುಂಬಾ ನೋವಾಗುತ್ತದೆ ಎಂದು ಮಹಿಳೆ ಪೊಲೀಸ್ ಅಧಿಕಾರಿಗಳಿಗೆ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ