ನಮ್ಮ ದೇಶ ಬಿಟ್ಟು ತೊಲಗಿರೆಂದು ಫೈರಿಂಗ್ ಮಾಡಿದ ಅಮೇರಿಕನ್: ಭಾರತೀಯನ ದುರ್ಮರಣ

ಶುಕ್ರವಾರ, 24 ಫೆಬ್ರವರಿ 2017 (08:27 IST)
ಅಮೇರಿಕದ ಕನ್ನಾಸ್‌ನ ಬಾರ್‌ವೊಂದರಲ್ಲಿ ಫೈರಿಂಗ್ ನಡೆಸಲಾಗಿದ್ದು, ಘಟನೆಯಲ್ಲಿ ಓರ್ವ ಭಾರತೀಯ ದುರ್ಮರಣವನ್ನಪ್ಪಿದ್ದಾನೆ. 
 
 
ಮೃತನನ್ನು ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನು ಕಚ್ಚಿಬೋತ್ಲಾ ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ಅಲೋಕ್ ಮದಸಾನಿ ಸೇರಿದಂತೆ ಮತ್ತಿಬ್ಬರು ಫೈರಿಂಗ್‌ನಲ್ಲಿ ಗಾಯಗೊಂಡಿದ್ದಾರೆ. ಮದಸಾನಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
 
ಆ್ಯಡಮ್ ಪುರಿಂಟೋನ್ (51) ಎಂಬ ನಿವೃತ್ತ ನೌಕಾಪಡೆಯ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ನಮ್ಮ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗುತ್ತ ಗುಂಡು ಹಾರಿಸಿದ್ದಾನೆಂದು ಹೇಳಲಾಗುತ್ತಿದೆ. ಆರೋಪಿಯನ್ನು ಬಂಧಿಸಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಇದು ಜನಾಂಗೀಯ ದ್ವೇಷದಿಂದ ನಡೆದ ದಾಳಿ ಎನ್ನಲಾಗುತ್ತಿದೆ.
 
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದಲ್ಲಿ ನೆಲೆಯೂರಿರುವ ವಿದೇಶಿ ವಲಸಿಗರನ್ನು ಹೊರಹಾಕುವ ಯತ್ನದಲ್ಲಿರುವಾಗ ನಡೆದಿರುವ ಈ ದಾಳಿ ಅಲ್ಲಿನ ಭಾರತೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.
 

ವೆಬ್ದುನಿಯಾವನ್ನು ಓದಿ