ಫ್ಲಾರಿಡಾದಲ್ಲಿ ಭಾರತೀಯನ ಅಂಗಡಿಗೆ ಬೆಂಕಿ ಹಚ್ಚಲು ಯತ್ನ

ಭಾನುವಾರ, 12 ಮಾರ್ಚ್ 2017 (14:32 IST)
ಅಮೆರಿಕದ ಫ್ಲಾರಿಡಾದಲ್ಲಿ ಭಾರತೀಯನಿಗೆ ಸೇರಿದ ಅಂಗಡಿಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ಅಮೆರಿಕದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಅರಬ್ ಮೂಲದ ಮುಸ್ಲಿಂ ವ್ಯಕ್ತಿಯ ಶಾಪ್ ಎಂದು ತಪ್ಪಾಗಿ ತಿಳಿದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಬಂಧಿತ ವ್ಯಕ್ತಿಯನ್ನ 64 ವರ್ಷದ ರಿಚರ್ಡ್ ಲಾಯ್ಡ್ ಎಂದು ಗುರ್ತಿಸಲಾಗಿದೆ. ಅರಬ್ ಜನರನ್ನ ದೇಶದಿಂದ ಹೊರಹಾಕಬೇಕು, ಅಂಗಡಿ ಮಾಲೀಕ ಒಬ್ಬ ಮುಸಲ್ಮಾನ್ ಎಂದು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ವಿಚಲಿತನಾಗಿದ್ದ ವ್ಯಕ್ತಿ ಈ ರೀತಿಯ ಕೃತ್ಯ ಸಗಿದ್ದಾನೆ ಎಂದು ತಿಳಿದುಬಂದಿದೆ.

ಕನ್ಸಾಸ್`ನಲ್ಲಿ ಭಾರತೀಯ ಹತ್ಯೆ ಬಳಿಕ ನಡೆದ 5ನೇ ದಾಳಿ ಇದಾಗಿದೆ. ಬೇರೆ ರಾಷ್ಟ್ರದವರ ಮೇಲೆ ಜನಾಂಗೀಯ ದಾಳಿಗಳಿಗೂ ಭಾರತೀಯ ಗುರಿಯಾಗುತ್ತಿರುವುದು ಆಘಾತಕಾರಿಯಾಗಿದೆ.

ವೆಬ್ದುನಿಯಾವನ್ನು ಓದಿ