ವಿದೇಶ ಪ್ರವಾಸ: ಪ್ರಧಾನಿ ಮೋದಿಯನ್ನೇ ಹಿಂದಿಕ್ಕಿದ ಪಾಕ್ ಪ್ರಧಾನಿ ನವಾಜ್ ಷರೀಫ್‌‌

ಗುರುವಾರ, 18 ಫೆಬ್ರವರಿ 2016 (16:33 IST)
ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ತಮ್ಮ ಅಧಿಕಾರವಧಿಯ ಪ್ರತಿ ಐದನೇ ದಿನ ವಿದೇಶ ಪ್ರವಾಸ ಕೈಗೊಂಡು ಸರಕಾರದ ಖಜಾನೆಯಿಂದ ಒಟ್ಟು 638 ಮಿಲಿಯನ್ ರೂಪಾಯಿಗಳನ್ನು ವೆಚ್ಚ ಮಾಡಿ ದಾಖಲೆ ಸ್ಥಾಪಿಸಿದ್ದಾರೆ.
 
ವಿದೇಶ ಪ್ರವಾಸಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತೀವ್ರ ಸ್ಪರ್ಧೆಯೊಡ್ಡಿರುವ ಷರೀಫ್, ಒಂದು ವರ್ಷದ ಅವಧಿಯಲ್ಲಿ ತಮ್ಮ 631 ಅಧಿಕಾರಿಗಳೊಂದಿಗೆ 185 ದಿನಗಳ ವಿದೇಶ ಪ್ರವಾಸ ಕೈಗೊಂಡು 65 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ.
 
ಕಳೆದ 2013ರ ಜೂನ್ ತಿಂಗಳಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಷರೀಫ್, ವಿಪಕ್ಷಗಳ ಭಾರಿ ಟೀಕೆಗಳ ಮಧ್ಯೆಯೂ ವಿದೇಶ ಪ್ರವಾಸ ಮುಂದುವರಿಸಿದ್ದಾರೆ. ನವಾಜ್ ಷರೀಫ್ ವಿದೇಶ ಪ್ರವಾಸದ 638.27 ಮಿಲಿಯನ್ ವೆಚ್ಚ ದೇಶದ ಬೊಕ್ಕಸಕ್ಕೆ ಅಪಾರ ಹಾನಿಯಾಗಿದೆ. ಷರೀಫ್ 17 ಬಾರಿ ಬ್ರಿಟನ್ ದೇಶಕ್ಕೆ ನೀಡಿ, ಸುಮಾರು ಎರಡು ತಿಂಗಳುಗಳ ಕಾಲ ವಾಸವಾಗಿದ್ದರು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.  
 
ಪ್ರಧಾನಿ ಷರೀಫ್ 940 ದಿನಗಳ ಕಾಲ ಅಧಿಕಾರದಲ್ಲಿದ್ದು ವಿದೇಶ ಪ್ರವಾಸಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಸತ್ತಿಗೆ ಹಾಜರಾಗುವ ಬಗ್ಗೆ ಆದ್ಯತೆ ನೀಡಬಹುದಿತ್ತು. ಆದರೆ, ಕೇವಲ ಸಂಸತ್ತಿಗೆ ಕೇವಲ 34 ಬಾರಿ ಹಾಜರಾಗಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ.
 
ಷರೀಫ್, ಅಮೆರಿಕ ದೇಶಕ್ಕೆ ಹಲವಾರು ಬಾರಿ ಪ್ರವಾಸ ಮಾಡಿ 18 ದಿನಗಳನ್ನು ಕಳೆದಿದ್ದಾರೆ. ಸೌದಿ ಅರೇಬಿಯಾ ದೇಶಕ್ಕೆ ಐದು ಬಾರಿ ಭೇಟಿ ನೀಡಿದ್ದಾರೆ. ತುರ್ಕಿ ದೇಶಕ್ಕೆ ಪ್ರತಿ ವರ್ಷ ಪ್ರವಾಸ ಹಮ್ಮಿಕೊಳ್ಳುತ್ತಾರೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ