ಎಂಎಚ್ 17 ವಿಮಾನವನ್ನು ಹೊಡೆದುರುಳಿಸಿದ್ದು ರಷ್ಯಾ ನಿರ್ಮಿತ ಬಿಯುಕೆ ಕ್ಷಿಪಣಿ

ಮಂಗಳವಾರ, 13 ಅಕ್ಟೋಬರ್ 2015 (20:02 IST)
ಮಲೇಷಿಯಾದ ಏರ್‌ಲೈನ್ಸ್ ಫ್ಲೈಟ್ ಎಂಎಚ್ 17 ವಿಮಾನವನ್ನು ಹೊಡೆದುರುಳಿಸಿದ್ದು ರಷ್ಯಾ ನಿರ್ಮಿತ ಬಿಯುಕೆ ಕ್ಷಿಪಣಿ ಎಂಬ ಸ್ಫೋಟಕ ಮಾಹಿತಿ ದೃಢಪಟ್ಟಿದೆ.  ಬಂಡುಕೋರರ ವಶದಲ್ಲಿದ್ದ ಪೂರ್ವ ಉಕ್ರೇನ್ ನೆಲೆಯಿಂದ ಈ ಕ್ಷಿಪಣಿಯನ್ನು ಹಾರಿಸಲಾಗಿತ್ತು ಎಂದು ಡಚ್ ದಿನಪತ್ರಿಕೆ ತಿಳಿಸಿದೆ. 
 
ಇದರಿಂದ ಬೋಯಿಂಗ್ 777 ವಿಮಾನ ಆಕಾಶ ಮಧ್ಯದಲ್ಲಿ ಸ್ಫೋಟಗೊಂಡು 298 ಜನರು ಬಲಿಯಾಗಿದ್ದು ಹೇಗೆಂಬ ಕುರಿತು ಆವರಿಸಿದ್ದ ಸುಮಾರು 15 ತಿಂಗಳ ಊಹಾಪೋಹಗಳಿಗೆ ತೆರೆಬಿದ್ದಿದೆ. 
 
ತನಿಖೆಗೆ ಸಮೀಪದ ಮೂರು ಮೂಲಗಳನ್ನು ಉಲ್ಲೇಖಿಸಿ, ತನಿಖೆಯಲ್ಲಿ ವಿಮಾನವು ಬಿಯುಕೆ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯು 2014ರ ಜುಲೈ 17ರಂದು ಆಮ್‌ಸ್ಟರ್‌ಡ್ಯಾಂನಿಂದ ಕೌಲಾಲಂಪುರಕ್ಕೆ ತೆರಳುತ್ತಿದ್ದ ವಿಮಾನಕ್ಕೆ ಬಡಿದು ಸ್ಫೋಟ ಸಂಭವಿಸಿತ್ತು. 
 
ವರದಿಯಲ್ಲಿ ಅಪಘಾತಗೊಂಡ ಸ್ಥಳದ ನಕ್ಷೆ, ಉಕ್ರೇನ್ ಗ್ರಾಬೋವ್ ಗ್ರಾಮ ಗದ್ದೆಗಳಲ್ಲಿ ವಿಮಾನದ ಅವಶೇಷಗಳು ಹರಡಿಕೊಂಡಿದ್ದನ್ನು ತಿಳಿಸಲಾಗಿದೆ. 
ಉಕ್ರೇನ್ ಪಡೆಗಳು ಹಾರಿಸಿದ ಕ್ಷಿಪಣಿ ವಿಮಾನಕ್ಕೆ ಬಡಿದಿವೆ ಎಂದು ಮಾಸ್ಕೊ ವಾದ ಮಂಡಿಸಿತ್ತು.
 
ಡಚ್ ಸುರಕ್ಷತೆ ಮಂಡಳಿ ತನಿಖೆದಾರರ ಅಂತಾರಾಷ್ಟ್ರೀಯ ತಂಡಕ್ಕೆ ನೇತೃತ್ವ ವಹಿಸಿದ್ದು, ಬಿಯುಕೆ ಕ್ಷಿಪಣಿಯನ್ನು ರಷ್ಯಾದಲ್ಲಿ ನಿರ್ಮಿಸಿ ಅಭಿವೃದ್ಧಿಪಡಿಸಲಾಗುತ್ತದೆ. 
 ಬಂಡುಕೋರರು ಇಂತಹ ಉಪಕರಣವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ರಷ್ಯಾ ಮಿಲಿಟರಿ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರಬಹುದೆಂದು ದಿನಪತ್ರಿಕೆ ಶಂಕಿಸಿದೆ. 

ವೆಬ್ದುನಿಯಾವನ್ನು ಓದಿ