ತದ್ರೂಪಗಳನ್ನು ಸೃಷ್ಟಿಸಲು ಡಿಎನ್‌ಎ ಕ್ಲೋನ್ ಮಾಡಿದ ಮೈಕೇಲ್ ಜಾಕ್ಸನ್

ಶನಿವಾರ, 1 ನವೆಂಬರ್ 2014 (17:10 IST)
ಖ್ಯಾತ ಪಾಪ್ ಗಾಯಕ ಮೈಕೇಲ್ ಜಾಕ್ಸನ್ ಮಿನಿ ಜಾಕ್ಸನ್ ಪಡೆಯನ್ನು ಸೃಷ್ಟಿಸಲು ಮತ್ತು ತಮ್ಮ ಪರಿಪೂರ್ಣ ನಕಲನ್ನು ತಯಾರಿಸಲು ಡಿಎನ್‌ಎ ಕ್ಲೋನ್ ಮಾಡಿರುವುದು ಬೆಳಕಿಗೆ ಬಂದಿದೆ. ಮೈಕೇಲ್ ಜಾಕ್ಸನ್ ವಿಶಿಷ್ಟ ರೀತಿಯ ಹಾವಭಾವಗಳಿಂದ ನೃತ್ಯ ಮಾಡುತ್ತಿದ್ದರು ಮತ್ತು ಲಕ್ಷಾಂತರ ಜನರ ಹೃದಯ ಸೂರೆಗೊಂಡಿದ್ದರು. ತಮ್ಮ ನಂತರ ಪ್ರೇಕ್ಷಕರನ್ನು ರಂಜಿಸಲು ತಮ್ಮ ತದ್ರೂಪಗಳನ್ನು ಸೃಷ್ಟಿಸಲು ನಿರ್ಧರಿಸಿದ್ದ ಜಾಕ್ಸನ್ ಅದಕ್ಕಾಗಿ ಡಿಎನ್‌ಎ ಕ್ಲೋನ್ ಮಾಡಿದ್ದರು.
 
ಜಾಕ್ಸನ್ ಅವರ ಉಡುಪು ವಿನ್ಯಾಸಕ ಮತ್ತು ಸ್ನೇಹಿತ ಆಂಡ್ರೆ ವಾನ್ ಪೈರ್   ಅವರಿಂದ ಪಾಪ್ ಗಾಯಕನ ವೀರ್ಯ ಯೋಜನೆಯನ್ನು ತಿಳಿದಿದ್ದ ವಿಜ್ಞಾನಿ ಮೈಕೇಲ್  ಲಕ್‌ಮ್ಯಾನ್, ವಿಶ್ವಾದ್ಯಂತ ಮೂರು ವಿವಿಧ ವೈದ್ಯಕೀಯ ಕೇಂದ್ರಗಳಲ್ಲಿ ಜಾಕ್ಸನ್ ತನ್ನ ವೀರ್ಯವನ್ನು ಸುರಕ್ಷಿತ ಸಂಗ್ರಹದಲ್ಲಿ ಇಟ್ಟಿದ್ದರೆಂದು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. 

 
ಪನಾಮಾದ ಲಾಂಗಿವಿಟಿ ಕೇಂದ್ರದ ನಿಕಟವರ್ತಿಯಿಂದ ಜಾಕ್ಸನ್ ಅವರ ಕ್ಲೋನಿಂಗ್ ಪ್ರಯೋಗಗಳು ಮತ್ತು ವೀರ್ಯ ಶೇಖರಣೆಯನ್ನು ಪೈರ್  ತಿಳಿದಿದ್ದರು. ಲಕ್‌ಬುಕ್ ಇವೆಲ್ಲವನ್ನೂ ದಿ ಬಾಟಲ್  ಆಫ್ ಮೈಕೇಲ್  ಜಾಕ್ಸನ್ ಸೌಲ್  ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಬರೆದಿದ್ದಾರೆ. 

ವೆಬ್ದುನಿಯಾವನ್ನು ಓದಿ