ಟ್ರಾಫಿಕ್‌ ಸಿಗ್ನಲ್‌ನಲ್ಲಿ ಇದ್ದಕ್ಕಿದ್ದಂತೆ ಮೇಲೆ ಹಾರಿದ ಮಿನಿವ್ಯಾನ್

ಭಾನುವಾರ, 29 ನವೆಂಬರ್ 2015 (11:39 IST)
ಚೀನಾದ ಹೆಬೈ ಪ್ರಾಂತ್ಯದ ಕ್ಸಿಂಗ್ಟೈ ಟ್ರಾಫಿಕ್ ಸಿಗ್ನಲ್‌ನಲ್ಲಿ ಮಿನಿವ್ಯಾನೊಂದು ಇದ್ದಕ್ಕಿದ್ದಂತೆ ಮೇಲೆ ಹಾರಿ ಕೆಳಕ್ಕೆ ಬಿದ್ದು ಪಲ್ಟಿಯಾದ ನಂತರ  ಹಿಂದೆ ಬರುತ್ತಿದ್ದ ಮತ್ತೊಂದು ವಾಹನವೂ ಮೇಲೆ ಹಾರಿ ಕೆಳಕ್ಕೆ ಬಿದ್ದ ವಿಚಿತ್ರ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಟ್ರಾಫಿಕ್‌ ಸಿಗ್ನಲ್‌ನಲ್ಲಿ ಮಾಮೂಲಿಯಾಗಿ ಬರುತ್ತಿದ್ದ ವ್ಯಾನ್ ಹಿಂದಿನ ಚಕ್ರಗಳು ಮೇಲೆ ಹಾರಿ ಚಿಮ್ಮಿ ಪಲ್ಟಿಹೊಡೆದಿವೆ. ಹಿಂದಿದ್ದ ಮತ್ತೊಂದು ವ್ಯಾನ್ ಕೂಡ ಮೇಲೆ ಚಿಮ್ಮಿದೆ. 

ಇಂತಹ ಅತಿಮಾನುಷ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಮಿನಿ ವ್ಯಾನ್ ಚಾಲಕ ಸಿಗ್ನಲ್ ಬಳಿ ವೇಗವಾಗಿ ಬಂದು ಬ್ರೇಕ್ ಹಾಕಿದ್ದರೆ ವ್ಯಾನ್ ಮುಂಭಾಗದ ಚಕ್ರ ಮೇಲೇರುವ ಸಾಧ್ಯತೆಯಿತ್ತು.

ಆದರೆ  ನಿಧಾನವಾಗಿ ಬರುತ್ತಿದ್ದರೂ ವ್ಯಾನ್ ಮೇಲೆ ಹಾರಿದ್ದು ಹೇಗೆ, ಹಿಂದಿದ್ದ ಮತ್ತೊಂದು ವ್ಯಾನ್‌ಗೆ ಮುಂದಿದ್ದ ವ್ಯಾನ್ ಸ್ಪರ್ಶಿಸದಿದ್ದರೂ ಅದೂ ಕೂಡ ಮೇಲೆ ಜಂಪ್ ಮಾಡಿದ್ದು ಏಕೆ ಎಂಬ ಪ್ರಶ್ನೆಗಳು ಈಗ ನಿಗೂಢವಾಗಿ ಉಳಿದಿವೆ. ಈ ವಿಚಿತ್ರ ಘಟನೆಗೆ ಪೊಲೀಸರು ಕಾರಣ ಹುಡುಕುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ