ಟೋಕಿಯೊ ಉದ್ಯಮಮೇಳದಲ್ಲಿ ಫುಲ್ ಜೋಶ್‌ನಲ್ಲಿ ಡ್ರಂ ಬಾರಿಸಿದ ಮೋದಿ

ಮಂಗಳವಾರ, 2 ಸೆಪ್ಟಂಬರ್ 2014 (13:15 IST)
ಟೋಕಿಯೋದಲ್ಲಿ ನಡೆದ ಉದ್ಯಮ ಮೇಳದಲ್ಲಿ ನರೇಂದ್ರ ಮೋದಿ ಫುಲ್ ಜೋಶ್‌ನಲ್ಲಿ ಡ್ರಂ ಬಾರಿಸಿ ಸಂಭ್ರಮಿಸಿದರು ಮತ್ತು ಜನಮನ ಗೆದ್ದರು. ಮೋದಿಯ  ಡ್ರಂ ಬಾರಿಸುವ ಕೈಚಳಕ  ನೋಡಿ ಜನರು ಪುಳಕಿತರಾದರು.  ಮೋದಿ ಡ್ರಮ್ ವಾದಕನು ಬಾರಿಸುತ್ತಿದ್ದ  ಶೈಲಿಯಲ್ಲೇ ಡ್ರಮ ಬಾರಿಸಿ ಡ್ರಂ ವಾದನದಲ್ಲಿ ತಾವೇನು ಕಡಿಮೆಯಿಲ್ಲವೆಂದು ಸಾಬೀತು ಮಾಡಿದರು.  ಶಾಲೆಯಲ್ಲಿ ವಿದ್ಯಾರ್ಥಿಗಳು ಕೊಳಲು ಬಾರಿಸುವುದನ್ನು ನೋಡಿ ಅವರು ಕೂಡ ಕೊಳಲುವಾದನ ನುಡಿಸಿ ಸಂಭ್ರಮಿಸಿದ್ದರು.

 
ಟೋಕಿಯೊದಲ್ಲಿ ಹೂಡಿಕೆದಾರರ ಸಭೆಯಲ್ಲಿ ಮಾತನಾಡುತ್ತಾ, ಜಪಾನ್ ಹಾರ್ಡ್‌ವೇರ್‌ನಲ್ಲಿ ಮುಂದಿದೆ. ಭಾರತ ಸಾಫ್ಟ್‌ವೇರ್ ಉದ್ಯಮದಲ್ಲಿ ಅನುಭವ ಹೊಂದಿದೆ. ಹಾರ್ಡ್‌ವೇರ್, ಸಾಫ್ಟ್‌ವೇರ್ ಒಂದುಗೂಡಿಸಿ ಹೊಸದೊಂದು ಸೃಷ್ಟಿಮಾಡೋಣ ಎಂದು ಮೋದಿ ಭರವಸೆಯ ಮಾತನಾಡಿದರು. ಭಾರತದಲ್ಲಿ ನಮ್ಮ ಸರ್ಕಾರ 100 ದಿನಗಳನ್ನು ಪೂರೈಸಿದೆ. ಮೇಕ್ ಇನ್ ಇಂಡಿಯಾ ನಮ್ಮ ಗುರಿಯಾಗಿದೆ.

ಜಪಾನ್ ಹೂಡಿಕೆದಾರರಿಗೆ ಅಧಿಕೃತ ಆಹ್ವಾನ ನೀಡುತ್ತಿದ್ದೇನೆ. ನಿಮಗೆ ಬೇಕಾದ ಸೌಲಭ್ಯ ನೀಡಲು ನಾವು ಬದ್ಧರಾಗಿದ್ದೇವೆ. ರತ್ನಗಂಬಳಿ ಹಾಸಿ ಎಲ್ಲದಕ್ಕೂ, ಎಲ್ಲರಿಗೂ ಸ್ವಾಗತ ನೀಡುತ್ತೇವೆ ಎಂದು  ನರೇಂದ್ರ ಮೋದಿ ಜಪಾನಿ ಹೂಡಿಕೆದಾರರಿಗೆ ಭರವಸೆ ತುಂಬಿದರು.

ಜಪಾನ್ ವ್ಯಾಪಾರ ಮಾರುಕಟ್ಟೆಗೆ ಅನುಗುಣವಾಗಿ ಭಾರತದಲ್ಲಿ ಸ್ಥಳವಿದೆ. ಬಂಡವಾಳ ಹೂಡಿಕೆಗೆ ಭಾರತ ಹೇಳಿ ಮಾಡಿಸಿದ ಜಾಗ.  ಉತ್ಪಾದನೆಗೆ ಅನುಕೂಲಕರ ವಾತಾವರಣ ಭಾರತದಲ್ಲಿದೆ. ಭಾರತದ 50 ನಗರಗಳಲ್ಲಿ ಮೆಟ್ರೋ ರೈಲು ಆರಂಭಿಸುತ್ತೇವೆ ಎಂದು ಮೋದಿ ತಮ್ಮ ಕನಸುಗಳನ್ನು ಬಿಚ್ಚಿಟ್ಟರು. 

ವೆಬ್ದುನಿಯಾವನ್ನು ಓದಿ