ಭಯೋತ್ಪಾದನೆ ರಫ್ತಿನ ಬಗ್ಗೆ ಮೋದಿ ಕಳವಳ

ಶುಕ್ರವಾರ, 9 ಸೆಪ್ಟಂಬರ್ 2016 (18:50 IST)
ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ನೆರೆಯಲ್ಲಿರುವ ಒಂದು ರಾಷ್ಟ್ರ ಭಯೋತ್ಪಾದಕರನ್ನು ಉತ್ಪಾದಿಸಿ ರಫ್ತು ಮಾಡುತ್ತಿದೆ ಎಂದು ಪರೋಕ್ಷವಾಗಿ ದೂರಿದರು. ಅಂತಾರಾಷ್ಟ್ರೀಯ ಸಮುದಾಯ ಈ ರಾಷ್ಟ್ರವನ್ನು ಒಂಟಿಯಾಗಿಸಿ, ದಿಗ್ಬಂಧನ ಹೇರಬೇಕು ಎಂದು ಆಗ್ರಹಿಸಿದರು. 
 
ನೆರೆಯ ಒಂದು ರಾಷ್ಟ್ರವು ಭಯೋತ್ಪಾದನೆಯನ್ನು ಉತ್ಪಾದಿಸಿ ರಫ್ತು ಮಾಡುವುದರಲ್ಲಿ ಮಾತ್ರ ಸ್ಪರ್ಧಾತ್ಮಕವಾಗಿ ಅನುಕೂಲ ಪಡೆದಿದೆ ಎಂದು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಕಿಸ್ತಾನವನ್ನು ಹೆಸರಿಸದೇ ಹೇಳಿದರು. ಭಯೋತ್ಪಾದನೆಯ ಜಾಗತಿಕ ರಫ್ತುದಾರನನ್ನು ತಡೆಯಲು ಈಗ ಕಾಲ ಕೂಡಿಬಂದಿದೆ ಎಂದು ಮೋದಿ ಪ್ರತಿಪಾದಿಸಿದರು.
 
 14ನೇ ಏಸಿಯಾನ್-ಭಾರತ ಶೃಂಗಸಭೆಯಲ್ಲಿ ಕೂಡ  ಮೋದಿ ಭಯೋತ್ಪಾದನೆ ರಫ್ತು ಹೆಚ್ಚಳದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ವೆಬ್ದುನಿಯಾವನ್ನು ಓದಿ