ಸೇಲ್ ಸೇಲ್ ...8.4 ಕೋಟಿ ರೂಪಾಯಿಗಳಿಗೆ 'ಮೋದಿ' ದ್ವೀಪ ಮಾರಾಟ

ಶುಕ್ರವಾರ, 9 ಜನವರಿ 2015 (17:02 IST)
ಮೋದಿ ಎಂಬ ಪದವೆಂದರೆ ಅದು ಭಾರತದ ಪ್ರಧಾನಿಯನ್ನೇ ಕಣ್ಮುಂದೆ ತಂದು ನಿಲ್ಲಿಸುತ್ತದೆ. ಆದರೆ ಗ್ರೀಸ್‌ನಲ್ಲಿ ಮೋದಿ ಎಂಬ ಹೆಸರಿನ 'ದ್ವೀಪ'ವೊಂದಿದೆ. ಈಗ ಅದನ್ನು ಮಾರಾಟಕ್ಕಿಡಲಾಗಿದೆ. ಅದರ ಬೆಲೆ 8.4 ಕೋಟಿ ರೂಪಾಯಿ.
ಸಣ್ಣ ನಿರ್ಜನ ದ್ವೀಪ, ಭಾರತೀಯತೆಯನ್ನು ಪ್ರತಿಧ್ವನಿಸುವ  ಹೆಸರನ್ನು ಹೇಗೆ ಪಡೆಯಿತು ಎಂಬುದು ನಿಗೂಢ.  ಲೋನಿಯನ್ ಸಮುದ್ರದಲ್ಲಿರುವ ಈ ದ್ವೀಪ ಅತಿ ರಮಣೀಯವಾಗಿದ್ದು, ಗ್ರೀಸ್ ರಾಜಧಾನಿ ಅಥೆನ್ಸ್‌ಗೆ ಅತಿ ಹತ್ತಿರದಲ್ಲಿದೆ. 
 
ನಿಮ್ಮ ಬಳಿ ಸಾಕಷ್ಟು ಹಣವಿದ್ದಿದ್ದರೆ ನೀವಿ ಅಮೂಲ್ಯವಾದ ಆಸ್ತಿ ಮಾರಾಟವಾಗುತ್ತಿರುವ ಸ್ಥಳಕ್ಕೆ ಹೋಗಬಹುದು. 
 
ಮೋದಿ ದ್ವೀಪ 51 ಎಕರೆ ಪ್ರದೇಶವನ್ನು ಹೊಂದಿದ್ದು  ಫ್ರೀಹೋಲ್ಡ್ ಆಧಾರದ ಮೇಲೆ ಮಾರಾಟ ಮಾಡಲಾಗುತ್ತದೆ ಎಂದು ಖಾಸಗಿ ದ್ವೀಪಗಳ ಆನ್ಲೈನ್ ಹೇಳುತ್ತದೆ. 
 
ಆಸಕ್ತಿ ಉಳ್ಳವರಿಗಾಗಿ ದ್ವೀಪದ ವಿವರಣೆ: ಲೋನಿಯನ್ ಸಾಗರದಲ್ಲಿರುವ ಎಲ್ಲ ದ್ಪೀಪಗಳು ಸ್ಫಟಿಕ ಸ್ಪಷ್ಟ  ಮತ್ತು ತಿಳಿ ನೀಲಿ ಬಣ್ಣದ ನೀರಿಗೆ ಪ್ರಸಿದ್ಧವಾಗಿವೆ. ಈಜು, ಸಮುದ್ರ ಕ್ರೀಡೆಗಳು, ಮೇಲ್ಮೈ ಮತ್ತು ಆಳ ನೀರಿನ ಮೀನುಗಾರಿಕೆಗೆ ತಕ್ಕ ಸ್ಥಳವಾಗಿದೆ. ಪ್ರದೇಶದಲ್ಲಿ ಯಾವುದೇ ಕಾರ್ಖಾನೆಗಳಿಲ್ಲ ಅಥವಾ ಮಾಲಿನ್ಯವಿಲ್ಲ. ಪರಿಪೂರ್ಣ ನಿರ್ಮಲ ಪರಿಸರವಿದು. 
 
 ಗ್ರೀಸ್‌ನಲ್ಲಿ ಸುಮಾರು 3,000 ದ್ವೀಪಗಳಿವೆ. ಆದರೆ ಕೇವಲ ಬೆರಳೆಣಿಕೆಯಷ್ಟು ದ್ಪೀಪಗಳು ಮಾತ್ರ ಖಾಸಗಿ ಒಡೆತನದಲ್ಲಿದೆ. 

ವೆಬ್ದುನಿಯಾವನ್ನು ಓದಿ