100ಕ್ಕೂ ಹೆಚ್ಚು ಬೊಕೊ ಹರಾಮ್ ಉಗ್ರರ ಹತ್ಯೆ

ಭಾನುವಾರ, 8 ಫೆಬ್ರವರಿ 2015 (15:37 IST)
ನೈಜೀರಿಯಾ ಗಡಿಯಲ್ಲಿನ ಬೊಸ್ಸೊ ಮತ್ತು ಡಿಫ್ಫಾ ನಗರಗಳ ಮೇಲೆ ಏಕಾಯೇಕಿ ದಾಳಿ ನಡೆಸಿದ ಬೊಕೊ ಹರಾಮ್ ಉಗ್ರ ಮೇಲೆ ನೈಗರ್ ಸೇನೆ ನಡೆಸಿದ ಪ್ರತಿದಾಳಿಯಲ್ಲಿ 109 ಉಗ್ರರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. 
 
ಕಾರ್ಯಾಚರಣೆ ಸಂದರ್ಭದಲ್ಲಿ ನಾಲ್ಕು ಸೈನಿಕರೂ ಮತ್ತು ಒಬ್ಬ ನಾಗರಿಕ ಸಹ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಛೇಡಿಯನ್ ಮತ್ತು ಕ್ಯಾಮರೂನ್ ಸೇನೆಗಳ ಸಹಯೋಗದೊಂದಿಗೆ ನೈಗರ್ ಸೇನೆ ಈ ದಾಳಿಯನ್ನು ನಡೆಸಿತ್ತು. 
 
ನೈಜಿರಿಯಾ ಗಡಿಯಲ್ಲಿ ಬೊಕೊ ಹರಾಮ್ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿರುವ ಅಮೆರಿಕ, ಅವರ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಸೇನೆಗಳ ಜತೆ ಕೈಜೋಡಿಸುವುದಾಗಿ ಆಶ್ವಾಸನೆ ನೀಡಿದೆ. 
 
ದೇಶದಲ್ಲಿ ಬೊಕೊ ಹರಾಮ್‌ ಉಗ್ರರ ದಾಳಿ  ಮೀತಿಮೀರುತ್ತಿರುವ ಹಿನ್ನಲೆಯಲ್ಲಿ ನೈಜೀರಿಯಾದಲ್ಲಿ ಫೆಬ್ರವರಿ 14 ರಂದು ನಿಗದಿಯಾಗಿದ್ದ  ಚುನಾವಣೆಗಳನ್ನು ಆರು ತಿಂಗಳು ಮುಂದಕ್ಕೆ ಹಾಕಲಾಗಿದೆ. 

ವೆಬ್ದುನಿಯಾವನ್ನು ಓದಿ