ಎಸ್ಕಲೇಟರ್ ಅಪಘಾತದಲ್ಲಿ ಸಾಯುವ ಮುಂಚೆ ಮಗುವಿನ ಜೀವ ಉಳಿಸಿದ ತಾಯಿ

ಸೋಮವಾರ, 27 ಜುಲೈ 2015 (17:05 IST)
ಬೀಜಿಂಗ್ : ಎಸ್ಕಲೇಟರ್ ಫ್ಲೂರಿಂಗ್ ಅಡಿಯಲ್ಲಿ ಜಾರಿದ ಮಹಿಳೆಯೊಬ್ಬಳು ಪ್ರಾಣವನ್ನು ಕಳೆದುಕೊಂಡ ಘಟನೆ ಚೀನಾದ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಎಸ್ಕಲೇಟರ್‌ನಲ್ಲಿ ಸಂಭವಿಸಿದೆ. ತಾನು ಎಸ್ಕಲೇಟರ್ ಅಡಿ ಜಾರುವುದಕ್ಕೆ ಮುಂಚೆ ಅವಳು ತನ್ನ ಮಗುವನ್ನು ಸುರಕ್ಷಿತವಾಗಿ ಮುಂದೆ ತಳ್ಳಿದ್ದರಿಂದ ಮಗುವಿನ ಜೀವ ಉಳಿದಿದೆ.  ಕ್ಸಿಯಾಂಗ್ ಲಿಯುಜಾನ್ ತನ್ನ ಮಗುವನ್ನು ಕೈಯಲ್ಲಿ ಹಿಡಿದು ಎಸ್ಕಲೇಟರ್‌ನಲ್ಲಿ ಕೆಳಕ್ಕಿಳಿಯುತ್ತಿದ್ದಾಗ ಎಸ್ಕಲೇಟರ್ ಫ್ಲೂರಿಂಗ್ ಕೆಳಕ್ಕೆ ಜಾರಿದಳು. 
 
ಕ್ಸಿಯಾಂಗ್ ಎಸ್ಕಲೇಟರ್‌ನಿಂದ ಹೊರಗೆ ಕಾಲಿಡುತ್ತಿದ್ದಂತೆ ಫ್ಲೂರ್ ಪ್ಯಾನೆಲ್ ದೋಷದಿಂದ ಅವಳು ಒಳಕ್ಕೆ ಜಾರಿದ್ದಳು. ಆಗ ತನ್ನ ಪುತ್ರನನ್ನು ಮುಂದೆ ತಳ್ಳಿದ್ದರಿಂದ ಸಮೀಪದಲ್ಲಿ ನಿಂತಿದ್ದ ಅಂಗಡಿ ಸಹಾಯಕಿ ಮಗುವನ್ನು ಸರಕ್ಷಿತವಾಗಿ ಎಳೆದುಕೊಂಡಳು.

ಆದರೆ ಎಸ್ಕಲೇಟರ್ ಸುತ್ತುವುದು ಮುಂದುವರಿದು ಕ್ಸಿಯಾಂಗ್ ಅದರಡಿಯಲ್ಲಿ ನಾಪತ್ತೆಯಾಗಿದ್ದಳು. ಅಗ್ನಿಶಾಮಕ ಸಿಬ್ಬಂದಿ ಯಂತ್ರವನ್ನು ಕತ್ತರಿಸಲು ಸುಮಾರು 4 ಗಂಟೆ ತೆಗೆದುಕೊಂಡು ಗಮನಿಸಿದಾಗ ಮಹಿಳೆಯಲ್ಲಿ ಯಾವುದೇ ಜೀವದ ಕುರುಹು ಇರಲಿಲ್ಲ.

ವಿಡಿಯೊ ಚಿತ್ರದಲ್ಲಿ ತಾಯಿ ಮಗುವಿನೊಂದಿಗೆ ಕೆಳಕ್ಕಿಳಿಯುವಾಗ ಸಿಬ್ಬಂದಿ ಕೆಳಗೆ ನಿಂತಿದ್ದನ್ನು ತೋರಿಸಿದೆ.  ಈ ವಿಡಿಯೋವನ್ನು ನೋಡಿದ ಜನರು ಆಕ್ರೋಶಗೊಂಡಿದ್ದು, ಸ್ಕೋರ್ ಪ್ರಮಾದವೇ ಈ ಅನಾಹುತಕ್ಕೆ ಕಾರಣವೆಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ