ಮಗ ಶಾಲೆಗೆ ಚಕ್ಕರ್ ಹಾಕಿದನೆಂದು ಅಮ್ಮನಿಗೆ ಜೈಲು

ಗುರುವಾರ, 28 ಮೇ 2015 (16:40 IST)
ಭಾರತದಲ್ಲಿ  ಮಕ್ಕಳು ಶಾಲೆಗೆ ಚಕ್ಕರ್ ಹಾಕುವುದು ಸಾಮಾನ್ಯ. ಈ ಕಾರಣಕ್ಕೆ ಮಕ್ಕಳಿಗೆ ಶಿಕ್ಷೆ, ಎಚ್ಚರಿಕೆ ನೀಡಲಾಗುತ್ತದೆ. ತಮ್ಮ ಮಕ್ಕಳಿಗೆ ಏಕೆ ಶಿಕ್ಷೆ ನೀಡಿದರೆಂದು ಪೋಷಕರು ಶಾಲೆಗೆ ಬಂದು ಗಲಾಟೆ ಮಾಡುವುದು ಸಹ ನಮ್ಮ ದೇಶದಲ್ಲಿ ಮಾಮೂಲಿ. ಆದರೆ ಅಮೇರಿಕದ ಜಾರ್ಜಿಯಾದಲ್ಲಿ ಮಕ್ಕಳು ಈ ತಪ್ಪೆಸಗಿದರೆ ಏನು ಮಾಡುತ್ತಾರೆ ಗೊತ್ತಾ? ತಿಳಿಯಲು ಮುಂದೆ ಓದಿ...

ಜಾರ್ಜಿಯಾದಲ್ಲಿ ತಾಯಿಯೊಬ್ಬಳಿಗೆ ಜೈಲು ಶಿಕ್ಷೆಯಾಯಿತು, ಕಾರಣ ಆಕೆಯ ಮಗ ಶಿಕ್ಷಕರ ಅನುಮತಿ ಪಡೆಯದೇ ಶಾಲೆಯಿಂದ ನಾಪತ್ತೆಯಾಗಿದ್ದು. 
 
ಈ ಘಟನೆ ನಡೆದದ್ದು ಜಾರ್ಜಿಯಾದ ಸಿಲ್ವೇನಿಯಾ ನಗರದಲ್ಲಿ. ಅಲ್ಲಿನ ನಿವಾಸಿಯಾದ ಜೂಲಿ ಜಾಲ್ಸಿ ಮಗ 10 ವರ್ಷದ  ಸೆಮ್ಯೂಯಲ್ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಮೇ 10 ರಂದು ಸ್ಥಳೀಯ ಜಿಲ್ಲಾಡಳಿತದಿಂದ ಜೂಲಿಗೆ ಒಂದು ನೋಟಿಸ್ ಕಳುಹಿಸಲಾಗಿತ್ತು. ಈ ವರ್ಷ ನಿಮ್ಮ ಮಗ 12 ದಿನ ಶಾಲೆಗೆ ಗೈರಾಗಿದ್ದಾನೆ. ಆದರೆ ನೀವು ಈ ಕುರಿತು ಶಾಲೆಗೆ ಯಾವ ಮಾಹಿತಿ ನೀಡಿಲ್ಲ. ನಿಯಮಗಳ ಪ್ರಕಾರ ನಿಮ್ಮನ್ನು ಬಂಧಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಇದರಿಂದ ಚಿಂತಿತಳಾದ ಜೂಲಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಈ ಕುರಿತು ವಿಚಾರಿಸಿದ್ದಾಳೆ. 
 
ತನ್ನ ಮಗನ ಆರೋಗ್ಯ ಸರಿಯಿಲ್ಲದ ಕಾರಣದಿಂದ ಆತನನ್ನು ಮೂರು ದಿನ ಶಾಲೆಗೆ ಕಳುಹಿಸದಿದ್ದುದಕ್ಕೆ ಪ್ರಮಾಣಪತ್ರವನ್ನು ಶಾಲೆಗೆ ಕಳುಹಿಸಿದ್ದೆ. ನಂತರವೂ ಆತನ ಆರೋಗ್ಯ ಸರಿ ಹೋಗದ ಕಾರಣ ಇತರ ಮಕ್ಕಳಿಗೆ ಸೋಂಕು ತಗಲುಬಹುದೆಂಬ ಕಾರಣಕ್ಕೆ ಶಾಲೆಗೆ ಕಳುಹಿಸರಿಲ್ಲ. ವೈದ್ಯಕೀಯ ಪ್ರಮಾಣಪತ್ರ ಪಡೆಯುವುದು ಬಹಳ ದುಬಾರಿ ಎಂದು ಮತ್ತೆ ಅದನ್ನು ಪಡೆಯುವ ಪ್ರಯತ್ನ ಮಾಡಿರಲಿಲ್ಲ ಎಂದು ಜೂಲಿ ತನ್ನ ಮಗ ಶಾಲೆಗೆ ಬರದಿದ್ದುದಕ್ಕೆ ಕಾರಣವನ್ನು ಹೇಳಿದಳು. ಆದರೆ ಆಕೆಯ ಮಾತಿಗೆ ಗಮನ ನೀಡದ ಪೊಲೀಸರು ಕೇಸ್ ದಾಖಲಿಸಿ ಆಕೆಯನ್ನು ಬಂಧಿಸಿದರು. ನಂತರ ಆಕೆ ಜಾಮೀನಿನ ಮೇಲೆ ಹೊರ ಬಂದಿದ್ದಾಳೆ. ಈ ವಿಚಾರವನ್ನು ಜೂಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ