ತೃತೀಯ ಲಿಂಗಿಗಳಾದರೆ ಬಳಸಬೇಕು ಎಮ್ಎಕ್ಸ್

ಸೋಮವಾರ, 4 ಮೇ 2015 (17:28 IST)
ತೃತೀಯ ಲಿಂಗಿಗಳಿಗೆ ಯಾವ ರೀತಿಯಲ್ಲಿ ಸಂಬೋಧಿಸಬೇಕು ಎಂದು ಕಾಡುತ್ತಿದ್ದ ಗೊಂದಲವನ್ನು ಈಗ ಆಕ್ಸ್‌ಫರ್ಡ್ ಡಿಕ್ಷನರಿ ನಿವಾರಿಸಿದೆ. ತೃತೀಯ ಲಿಂಗಿಗಳಿಗೆ Mx ಎಂದು ಪದ ಬಳಸುವಂತೆ ಶಬ್ಧಕೋಶದಲ್ಲಿ ಸೂಚಿಸಲಾಗುತ್ತಿದೆ.

ಪುರುಷರಿಗೆ ಮಿಸ್ಟರ್ (Mr.), ಯುವತಿಯರಿಗೆ ಮಿಸ್ (Ms), ವಿವಾಹಿತ ಮಹಿಳೆಯರಿಗೆ ಮಿಸೆಸ್ (Mrs.) ಎಂದು ಇಂಗ್ಲೀಷ್ ಭಾಷೆಯಲ್ಲಿ ಬಳಸಲಾಗುತ್ತಿದೆ. ಆದರೆ ತೃತೀಯ ಲಿಂಗವನ್ನು ಸೂಚಿಸುವ ಯಾವುದೇ ಪದಬಳಕೆ ಇರಲಿಲ್ಲ. ಈಗ ಅದಕ್ಕೆ ತಿಲಾಂಜಲಿ ನೀಡಿರುವ ಆಕ್ಸ್‌ಫರ್ಡ್ ಡಿಕ್ಷನರಿ ಎಮ್ಎಕ್ಸ್ (Mx) ಎಂಬ ಪದವನ್ನು ಬಳಕೆಗೆ ತಂದಿದೆ.
 
ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್‌ನ ಅಧಿಕೃತ ದಾಖಲೆಗಳಲ್ಲಿ ಈ ಪದವನ್ನು ಬಳಸಲಾಗುತ್ತಿದ್ದು. ಈಗ ಆಕ್ಸಫರ್ಡ್ ಶಬ್ಧಕೋಶದ ಮುಂದಿನ ಆವೃತ್ತಿಯಲ್ಲಿ ಈ ಪದವನ್ನು ದಾಖಲಿಸಲು ನಿರ್ಧರಿಸಲಾಗಿದೆ. 
 
ಬ್ರಿಟನ್‌ನ ಸರಕಾರಿ ಇಲಾಖೆಗಳು, ಕೌನ್ಸಿಲ್‌ಗಳು, ಬ್ಯಾಂಕ್‌ಗಳು, ಕೆಲವು ವಿಶ್ವವಿದ್ಯಾಲಯಗಳು, ರಾಜಮನೆತನ ಮೇಲ್ ಸೇವೆಗಳು ಮತ್ತು  ಡ್ರೈವಿಂಗ್ ಲೈಸೆನ್ಸ್ ಮೇಲೆ ಈಗಾಗಲೇ ಈ ಪದದ ಬಳಕೆಯನ್ನು ಒಪ್ಪಿಕೊಂಡಿವೆ.
 
ಅಮೇರಿಕನ್ ಮಾಧ್ಯಮಗಳು 1977ರಲ್ಲಿ Mx  ಎಂಬ ಪದವನ್ನು ಏಕ ಪೋಷಕ ಎಂಬುದರ ಸಂಕೇತವಾಗಿ ಪ್ರಥಮವಾಗಿ ಬಳಸಿದ್ದವು.

ವೆಬ್ದುನಿಯಾವನ್ನು ಓದಿ