ಒಂದೇ ದಿನದಲ್ಲಿ ರೋಗಿಯನ್ನು ಕೊಲ್ಲುವ ನಿಗೂಢ ರೋಗ

ಭಾನುವಾರ, 19 ಏಪ್ರಿಲ್ 2015 (18:03 IST)
ನೈಜೀರಿಯಾದ ಆಗ್ನೇಯ ಭಾಗದಲ್ಲಿ ನಿಗೂಢ ರೋಗವೊಂದು ಕಾಣಿಸಿಕೊಂಡಿದ್ದು, 24 ಗಂಟೆಯೊಳಗೆ ರೋಗಿಗಳ ಜೀವವನ್ನು ಬಲಿಪಡೆಯುತ್ತದೆ. ಇದುವರೆಗೆ ಈ ರೋಗಕ್ಕೆ 17 ಜನರು ಬಲಿಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. 
 
ಓಡೆ ಇರೆಲೆ ಪಟ್ಟಣದಲ್ಲಿ ಈ ವಾರ ಹೊಮ್ಮಿದ ಈ ನಿಗೂಢ ರೋಗಕ್ಕೆ ಇದುವರೆಗೆ 17 ಜನರು ಬಲಿಯಾಗಿದ್ದಾರೆ ಎಂದು ಸರ್ಕಾರಿ ವಕ್ತಾರ ತಿಳಿಸಿದ್ದಾರೆ. 
 ತಲೆನೋವು, ತೂಕ ನಷ್ಟ, ದೃಷ್ಟಿಮಂದ ಮತ್ತು ಪ್ರಜ್ಞಾಹೀನ ಸ್ಥಿತಿಗೆ ದೂಡುವ ಈ ಕಾಯಿಲೆ ಕಾಣಿಸಿಕೊಂಡ 24 ಗಂಟೆಯೊಳಗೆ ರೋಗಿ ಅಸುನೀಗುತ್ತಾನೆ ಎಂದು ವಕ್ತಾರ ತಿಳಿಸಿದ್ದಾರೆ. 
 
 ಎಬೋಲಾ ಅಥವಾ ಬೇರಾವುದೇ ವೈರಸ್ ಅನ್ನು ಪ್ರಯೋಗಾಲಯ ಪರೀಕ್ಷೆಗಳು ತಳ್ಳಿಹಾಕಿವೆ. ನಿಗೂಢ ಸಾವಿನ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.  14 ಪ್ರಕರಣಗಳ ಬಗ್ಗೆ ತಮಗೆ ಮಾಹಿತಿಯಿದ್ದು ಅವುಗಳ ಪೈಕಿ 12 ರೋಗಿಗಳು ಸತ್ತಿದ್ದಾರೆ ಎಂದು ವಿಶ್ವಆರೋಗ್ಯ ಸಂಸ್ಥೆ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ