ಶಿಷ್ಟಾಚಾರ ಮುರಿದು ಕ್ಸಿ ಜಿನ್‌ಪಿಂಗ್‌ರಿಗೆ ಮೋದಿ ಸ್ವಾಗತ

ಸೋಮವಾರ, 15 ಸೆಪ್ಟಂಬರ್ 2014 (11:04 IST)
ಸೆ.17ರಂದು ನರೇಂದ್ರ ಮೋದಿ ಹುಟ್ಟುಹಬ್ಬದ ದಿನದಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್  ಅವರು ನರೇಂದ್ರಮೋದಿ ಅವರನ್ನು ಅಹ್ಮದಾಬಾದ್‌ಗೆ ಜೊತೆಗೂಡಲಿದ್ದಾರೆ. ಮೋದಿ ಶಿಷ್ಟಾಚಾರ ಮುರಿದು ಅಹ್ಮದಾಬಾದ್ ವಿಮಾನನಿಲ್ದಾಣದಲ್ಲಿ  ಜಿನ್‌ಪಿಂಗ್  ಅವರನ್ನು ಸ್ವಾಗತಿಸಲಿದ್ದಾರೆ. ಚೀನಾದ ಅಧ್ಯಕ್ಷರಿಗೆ ಭೋಜನಕೂಟದಿಂದ ಡಿನ್ನರ್‌ವರೆಗೆ ಎಲ್ಲಾ ವ್ಯವಸ್ಥೆಗಳ ಉಸ್ತುವಾರಿಯನ್ನು ಮೋದಿ ವಹಿಸಲಿದ್ದಾರೆ.
 
ಕ್ಸಿ ಜಿನ್ಪಿಂಗ್  ಅವರಿಗೆ ಮಿಲೆಟ್ ಬ್ರೆಡ್ ಮತ್ತು ಮಸಾಲಾ ಕಿಚಡಿ ಜೊತೆ 100ಕ್ಕೂ ಹೆಚ್ಚು ತಿನಿಸುಗಳನ್ನು ಬಡಿಸಲಾಗುತ್ತದೆ. ಚೀನಾ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ  ನಗರವನ್ನು ಸ್ವಚ್ಛಗೊಳಿಸಲಾಗುತ್ತಿದೆ. ರಾಜ್ಯದ ಅನೇಕ ಸಚಿವರಿಗೆ ಜಿನ್‌ಪಿಂಗ್  ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿದೆ. ವಿಮಾನನಿಲ್ದಾಣದಿಂದ ಕ್ಸಿ ಹಯಾಟ್ ಹೊಟೆಲ್‌ಗೆ ತೆರಳಿದ್ದಾರೆ. ಇಲ್ಲಿ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಗಾಂಗ್‌ಡಾಂಗ್ ಪ್ರಾಂತ್ಯದ ನಡುವೆ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.

ಸಹಿ ಪ್ರಕ್ರಿಯೆಯಲ್ಲಿ ಮೋದಿ ಮತ್ತು ಜಿನ್‌ಪಿಂಗ್ ಇಬ್ಬರೂ ಉಪಸ್ಥಿತರಿರಲಿದ್ದಾರೆ. ಹಯಾಟ್ ಹೊಟೆಲ್ ಭೋಜನಕೂಟದಲ್ಲಿ ಚೀನಾದ ಅಧ್ಯಕ್ಷರಿಗೆ ಗುಜರಾತಿ ಥಾಲಿಯನ್ನು ಬಡಿಸಲಾಗುತ್ತದೆ. ಅಧ್ಯಕ್ಷರ ಬೇಟಿಗೆ ಮುನ್ನ ನಗರವನ್ನು ಸ್ವಚ್ಛಗೊಳಿಸಲಾಗುತ್ತಿದ್ದು ಯಾವುದೇ ಕಸ ಅಥವಾ ತ್ಯಾಜ್ಯವಸ್ತು ಎಲ್ಲೂ ಕಾಣದಂತೆ ಖಚಿತಪಡಿಸಲಾಗುತ್ತಿದೆ. ಉಭಯ ನಾಯಕರು ಮಹಾತ್ಮಾ ಗಾಂಧಿ ಅವರ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ