ನೇಪಾಳ ಭೂಕಂಪ: ನಾಶವಾದ ಹಿಂದೂ ದೇವಾಲಯಗಳು ಅಪವಿತ್ರ, ಕ್ರೈಸ್ತ್ ದೇವಾಲಯ ಕಟ್ಟಿಸಿ ಎಂದು ಧರ್ಮೋಪದೇಶಕ

ಸೋಮವಾರ, 27 ಏಪ್ರಿಲ್ 2015 (16:05 IST)
ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಅಮೆರಿಕದ ಧರ್ಮೋಪದೇಶಕ, ಭೂಕಂಪದಲ್ಲಿ ನಾಶವಾದ ದೇವಾಲಯಗಳನ್ನು ಮತ್ತೆ ಕಟ್ಟುವುದು ಧರ್ಮಬಾಹಿರವಾಗಿದ್ದು, ಜನತೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಕ್ರೈಸ್ತ್ ದೇವಾಲಯಗಳನ್ನು ನಿರ್ಮಿಸಿ ಎಂದು ಸಲಹೆ ನೀಡಿದ್ದಾನೆ.

ಲಾಸ್ ಏಂಜಲೀಸ್‌ನ ಮಾಜಿ ಪೊಲೀಸ್ ಅಧಿಕಾರಿಯಾದ ಟೋನಿ ಮಿಯಾನೋ, ಭೂಕಂಪದಲ್ಲಿ ನಾಶವಾದ ದೇವಾಲಯಗಳು ಅಪವಿತ್ರವಾಗಿದ್ದು, ನೇಪಾಳದಲ್ಲಿರುವ ಜನತೆ ಕ್ರಿಶ್ಚಿಯನ್ನು ಧರ್ಮಕ್ಕೆ ಪರಿವರ್ತನೆಯಾಗುವುದು ಎಂದು ಸೂಕ್ತ ಎಂದು ಹೇಳಿದ್ದಾನೆ.

ರಾಜಾಡಳಿತ ಅಂತ್ಯಕ್ಕೆ ಮೊದಲು ನೇಪಾಳದಲ್ಲಿ ಶೇ.85 ರಷ್ಟು ಜನತೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ವಿಶ್ವದ ಏಕೈಕ ಹಿಂದೂ ರಾಷ್ಟ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು.

ಧರ್ಮೋಪದೇಶಕ ಟೋನಿ ಮಿಯಾನೋ ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಈ ಹಿಂದೆ ಕೂಡಾ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.

ಟೋನಿ ಮಿಯಾನೋ ಹೇಳಿಕೆಗಳು ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.

ವೆಬ್ದುನಿಯಾವನ್ನು ಓದಿ