ಬಾಲದೇವತೆಗೆ ತಟ್ಟದ ಭೂಕಂಪದ ಬಿಸಿ

ಭಾನುವಾರ, 3 ಮೇ 2015 (10:48 IST)
ಕಳೆದ 9 ದಿನಗಳ ಹಿಂದೆ ನೆರೆ ರಾಷ್ಟ್ರ ನೇಪಾಳದಲ್ಲಿ ನಡೆದ ವಿನಾಶಕಾರಿ ಭೂಕಂಪ ನೇಪಾಳದ ಬಾಲದೇವತೆ ಮತ್ತು ಆಕೆಯ ಅರಮನೆಯ ಮೇಲೆ ಯಾವುದೇ ರೀತಿಯ ಪರಿಣಾಮವನ್ನುಂಟು ಮಾಡಿಲ್ಲ.

ನೇಪಾಳದಾದ್ಯಂತ ಆರಾಧಿಸಲ್ಪಡುವ ಕುಮಾರಿ ಎಂಬ ಬಾಲ ದೇವತೆ ವಾಸಿಸುವ ಅರಮನೆಯ ಗೋಡೆಗಳಲ್ಲಿ ಸಣ್ಣ ಪ್ರಮಾಣದ ಬಿರುಕು ಬಿಟ್ಟಿದ್ದು, ಅದನ್ನು ಹೊರತು ಪಡಿಸಿದರೆ ಅರಮನೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ. ಅರಮನೆಯ ಅಕ್ಕಪಕ್ಕದಲ್ಲಿರುವ ಬಹಳಷ್ಟು ಕಟ್ಟಗಳು ಭೂಕಂಪದಿಂದಾಗಿ ಸಂಪೂರ್ಣ ನೆಲಸಮವಾಗಿದ್ದರು ಸಹ ಬಾಲದೇವತೆ ಅರಮನೆ ದೃಢವಾಗಿ ನಿಂತಿರುವುದು ಆಶ್ಚರ್ಯವನ್ನುಂಟು ಮಾಡಿದೆ.ರಾಷ್ಟ್ರದ ರಕ್ಷಕಿ ಎಂದು ಕರೆಯಲ್ಪಡುವ ಜೀವಂತ ಬಾಲದೇವತೆ ಸುರಕ್ಷಿತವಾಗಿರುವುದು ನೇಪಾಳಿಗರಲ್ಲಿ ಸಮಾಧಾನ ತಂದಿದೆ.
 
ನೇಪಾಳದಲ್ಲಿ ಪುಟ್ಟ ಹೆಣ್ಣು ಮಗುವನ್ನು ಬಾಲದೇವತೆಯಾಗಿ ನೇಮಿಸಲಾಗುತ್ತದೆ.  ದೇವತೆಯ ಮಾನ್ಯತೆ ಕೊಟ್ಟು ದುರ್ಗೆಯ ಪ್ರತಿರೂಪವಾಗಿ ಆಕೆಯನ್ನು ಆರಾಧಿಸಲಾಗುತ್ತದೆ.ಆಕೆ ಪ್ರೌಢಾವಸ್ಥೆಗೆ ತಲುಪಿದ ನಂತರ ಬೇರೆ ಮಗುವಿಗೆ ಪಟ್ಟ ಕಟ್ಟಲಾಗುತ್ತದೆ. ಬಾಲದೇವತೆ ರಾಷ್ಟ್ರ ರಾಜಧಾನಿಯಲ್ಲಿರುವ ಅರಮನೆಯಲ್ಲಿ ವಾಸಿಸುತ್ತಾರೆ. ಹಿಂದಿನ ಎಲ್ಲ ರಾಜಕುಮಾರಿಯರ ಕುಟುಂಬವು ಸಹ ಇದೇ ಅರಮನೆಯಲ್ಲಿಯೇ ವಾಸಿಸುತ್ತದೆ. 9 ವರ್ಷದ ಕುಮಾರಿ  ಪ್ರಸ್ತುತ ನೇಪಾಳದ ಬಾಲದೇವತೆಯಾಗಿದ್ದಾಳೆ. "ಆಕೆಯ ಶಕ್ತಿಯೇ ಈ ಸ್ಥಳವನ್ನು ಕಾಪಾಡಿದೆ", ಎನ್ನುತ್ತಾರೆ ನೇಪಾಳದ ನಿವಾಸಿಯೊಬ್ಬರು.

ವೆಬ್ದುನಿಯಾವನ್ನು ಓದಿ