ಆಸ್ಟ್ರೇಲಿಯಾದಲ್ಲಿ ಟೆಕ್ಕಿ ಪ್ರಭಾ ಹತ್ಯೆಗೆ ಬೆಂಗಳೂರಿನಿಂದಲೇ ಸುಪಾರಿ..?
ಶುಕ್ರವಾರ, 10 ಫೆಬ್ರವರಿ 2017 (11:56 IST)
ಪ್ರಭಾ ಅರುಣ್ ಕುಮಾರ್.. ಈ ಹೆಸರು ಕೇಳಿದ ಕೂಡಲೇ ಆಸ್ಟ್ರೇಲಿಯಾದಲ್ಲಿ ನಡೆದ ಭೀಕರ ಹತ್ಯೆಯ ನೆನಪಾಗುತ್ತೆ. ಮಾರ್ಚ್ 7, 2015ರಂದು ಕೆಲಸದಿಂದ ಮನೆಗೆ ತೆರಳುತ್ತಿದ್ದ ಪ್ರಭಾರನ್ನ ಹಿಂಬಾಲಿಸಿದ ಆಗಂತುಕ ಚಾಕುವಿನಿಂದ ರಿದು ಭೀಕರವಾಗಿ ಹತ್ಯೆಗೈದಿದ್ದ. ಸರಿ ಸುಮಾರು 2 ವರ್ಷಗಳ ಬಳಿಕ ಪ್ರಕರಣ ಹೊಸ ಟ್ವಿಸ್ಟ್ ಪಡೆದಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಹತ್ಯೆ ಬೆಂಗಳೂರಿನಲ್ಇಂದಲೇ ಸುಪಾರಿ ನೀಡಲಾಗಿತ್ತಾ..? ಎಂಬ ಸಂಶಯ ಮೂಡಿದೆ.
ಜನವರಿ 14ರಂದು ಬೆಂಗಳೂರಿಗೆ ಬಂದಿದ್ದ ನ್ಯೂ ಸೌತ್ ವೆಲ್ಸ್ ಪೊಲೀಸರು ಪತಿ ಅರುಣ್ ಕುಮಾರ್, ಸಂಬಂಧಿಕರು, ಅತ್ತೆ ಮಾವ, ಬಾವಂದಿರು, ಬಂಟ್ವಾಳದ ಅಮ್ಟೂರಿನಲ್ಲಿ ವಾಸವಿರುವ ಪ್ರಭಾ ಪೋಷಕರು, ‘ಮೈಂಡ್ ಟ್ರೀ’ ಕಂಪೆನಿಯ ಸಿಬ್ಬಂದಿ ಸೇರಿದಂತೆ ಹಲವರನ್ನ ವಿಚಾರಣೆಗೊಳಪಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್`ನಲ್ಲಿ ಪ್ರಭಾ ತವರಿಗೆ ಹಿಂದಿರುಗುವ ಯೋಚನೆ ಮಾಡಿದ್ದರು. ಅಷ್ಟರೊಳಗೆ ಹತ್ಯೆ ನಡೆದುಹೋಗಿದೆ. ಹೀಗಾಗಿ, ಪೊಲೀಸರಿಗೆ ಸಂಬಂಧಿಕರ ಮೇಲೆ ಅನುಮಾನ ಹೆಚ್ಚಾಗಿದೆ.