ಮೊಬೈಲ್‌ ಫೋನ್‌ನಲ್ಲಿ ವಧುವಿನ ಚಾಟಿಂಗ್: ವಿಚ್ಛೇದನ ನೀಡಿದ ಪತಿರಾಯ

ಬುಧವಾರ, 18 ಮೇ 2016 (14:21 IST)
ಸೌದಿ ಅರೇಬಿಯಾದ ಮಹಿಳೆಯೊಬ್ಬಳು ವಿವಾಹವಾದ ತಕ್ಷಣದಲ್ಲಿ ಮೊಬೈಲ್‌ ಫೋನ್‌ನಲ್ಲಿ ಸ್ನೇಹಿತರ ಜತೆ ಚಾಟಿಂಗ್ ಮಾಡುತ್ತಿರುವುದನ್ನು ಸಹಿಸದ ಪತಿರಾಯ ವಿಚ್ಛೇದನ ನೀಡಿದ ಪ್ರಸಂಗ ವರದಿಯಾಗಿದೆ. ವಿವಾಹ ಸಮಾರಂಭದ ಬಳಿಕ ನೂತನ ವಧು-ವರರು ಹೊಟೆಲ್ ಕೋಣೆಯೊಂದಕ್ಕೆ ತೆರಳಿದರು. ಅಲ್ಲಿ ವಧು ತನ್ನ ಸ್ನೇಹಿತರ ಜತೆ ಸಂದೇಶಗಳ ವಿನಿಮಯದಲ್ಲಿ ತೊಡಗಿದ್ದಳು.
 
ವರ ವಧುವಿನ ಜತೆ ಮಾತನಾಡಲು ಬಯಸಿದ್ದರೂ ವಧು ಅದನ್ನು ಕಡೆಗಣಿಸಿ ಸ್ನೇಹಿತರ ಜತೆ ಚಾಟಿಂಗ್ ಮುಂದುವರಿಸಿದಳು. ವರ ನಂತರ ಚಾಟ್ ಮಾಡುವಂತೆ ಸೂಚಿಸಿದಾಗ ವಧು ನಿರಾಕರಿಸಿದ್ದರಿಂದ ವರನಿಗೆ ಕೋಪ ನೆತ್ತಿಗೇರಿತು. ನಿನ್ನ ಸ್ನೇಹಿತರು ನನಗಿಂತ ಮುಖ್ಯವೇ ಎಂದು ವರ ಕೇಳಿದಾಗ ವಧು ಹೌದೆಂದು ಉತ್ತರಿಸಿದಳು.
 
ಆಗ ಇಬ್ಬರ ನಡುವೆ ಬಿಸಿ ಮಾತಿನ ಚಕಮಕಿ ನಡೆದು ವಧುವಿಗೆ ವಿಚ್ಛೇದನ ನೀಡುತ್ತಿರುವುದಾಗಿ ವರ ತಿಳಿಸಿ ಹೊಟೆಲ್‌ನಿಂದ ನಿರ್ಗಮಿಸಿದ. ವಿಚ್ಛೇದನ ಕೇಸ್ ಫೈಲ್ ಮಾಡಲಾಗಿದ್ದು, ದಂಪತಿಯ ನಡುವೆ ರಾಜಿ ಮಾಡಿಸಲು ಸಂಧಾನ ಸಮಿತಿಗೆ ಕೋರ್ಟ್ ಅದನ್ನು ಉಲ್ಲೇಖಿಸಿತು. 
 
ಆದರೆ ವರನಿಗೆ ತನ್ನ ಆತ್ಮಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಅವಳನ್ನು ಕ್ಷಮಿಸಲು ನಿರಾಕರಿಸಿ ಕೇಸ್ ವಾಪಸು ತೆಗೆದುಕೊಳ್ಳಲು ನಿರಾಕರಿಸಿದ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ