ಪತ್ನಿಯ ಮೇಲೆ ರೇಪ್ ಮಾಡಿದ ವ್ಯಕ್ತಿಯ ಗುಪ್ತಾಂಗ ಬೇಯಿಸಿ ತಿಂದ ಪತಿ

ಮಂಗಳವಾರ, 17 ನವೆಂಬರ್ 2015 (18:21 IST)
ಪತ್ನಿಯ ಮೇಲೆ ರೇಪ್ ಮಾಡಿದ ರೇಪಿಸ್ಟ್‌ನನ್ನು ಹತ್ಯೆ ಮಾಡಿ ಆತನ ಗುಪ್ತಾಂಗವನ್ನು ಕತ್ತರಿಸಿ ಬೇಯಿಸಿಕೊಂಡು ತಿಂದ ನವದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಸುಮಾತ್ರಾ ಐಲೆಂಡ್‌ನಲ್ಲಿ ವಿವಾಹಕ್ಕೆ ಒಂದು ವಾರ ಮುಂದಿರುವಂತೆಯೇ  ನನ್ನ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದನು ಎಂದು ಭಾವಿ ವಧು ಹೇಳಿಕೆ ನೀಡಿದ್ದರಿಂದ, ಪ್ರತಿಕಾರವಾಗಿ ಯುವಕನನ್ನು ಹತ್ಯೆ ಮಾಡಿ ದೇಹವನ್ನು ಸುಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. 
 
30 ವರ್ಷ ವಯಸ್ಸಿನ ಪತಿ ರುಡಿ ಎಫೆಂಡಿ, ವಿವಾಹವಾದ ಮೊದಲ ರಾತ್ರಿಯಂದು ತನ್ನ ಪತ್ನಿ ಕುಮಾರಿಯಾಗಿ ಉಳಿದಿಲ್ಲವೆಂದು ಶಂಕಿಸಿ ಪತ್ನಿಯನ್ನು ಕೇಳಿದಾಗ, ಪತ್ನಿ ತನ್ನ ಮೇಲೆ ರೇಪ್ ನಡೆದ ರಹಸ್ಯ ಬಹಿರಂಗಪಡಿಸಿದ್ದಾಳೆ.
 
ನನಗೆ ತುಂಬಾ ಕೋಪ ಬಂದಿತ್ತು. ಪತ್ನಿಯ ಮೇಲೆ ರೇಪ್ ಮಾಡಿದ ವ್ಯಕ್ತಿಯ ಗುಪ್ತಾಂಗವನ್ನು ತಿಂದಾಗ ಮಾತ್ರ ಕೋಪ ಶಮನವಾಗುತ್ತದೆ ಎಂದು ಭಾವಿಸಿದ್ದೆ ಎಂದು ಆರೋಪಿ ಎಫೆಂಡಿ ಸುದ್ದಿಗಾರರಿಗೆ ತಿಳಿಸಿದ್ದಾನೆ.
 
ಆರೋಪಿ ಎಫೆಂಡಿ, ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಹತ್ಯೆಮಾಡಿ, ಆತನ ಗುಪ್ತಾಂಗವನ್ನು ಕತ್ತರಿಸಿ ಮನೆಗೆ ತಂದು, ಪತ್ನಿಗೆ ಅದನ್ನು ಬೇಯಿಸಿ ನೀಡುವಂತೆ ಹೇಳಿದ್ದಾನೆ. ನಂತರ ದಂಪತಿಗಳು ರೇಪಿಸ್ಟ್‌ನ ಗುಪ್ತಾಂಗವನ್ನು ತಿಂದುಹಾಕಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ