ಪಾಕ್‌ನ ಯಾವುದೇ ಸೇನಾನೆಲೆಗಳ ಮೇಲೆ ದಾಳಿಯಾಗಿಲ್ಲ: ಆಸೀಫ್

ಮಂಗಳವಾರ, 23 ಮೇ 2017 (18:18 IST)
ಭಾರತೀಯ ಸೇನೆ ಪಾಕ್ ಬಂಕರ್‌ಗಳ ಮೇಲೆ ದಾಳಿ ಮಾಡಿದೆ ಎನ್ನುವುದನ್ನು ತಳ್ಳಿಹಾಕಿರುವ ಪಾಕಿಸ್ತಾನ, ನಮ್ಮ ಸೇನಾನೆಲೆಗಳ ಮೇಲೆ ದಾಳಿಯೇ ಆಗಿಲ್ಲ ಎಂದು ತಳ್ಳಿಹಾಕಿದೆ.
 
ಪಾಕಿಸ್ತಾನದ ಸೇನಾಧಿಕಾರಿ ಆಸೀಫ್ ಟ್ವೀಟ್ ಮಾಡಿ, ಭಾರತೀಯ ಸೇನಾ ದಾಳಿಯನ್ನು ತಳ್ಳಿಹಾಕಿದ್ದಾರೆ. ನಮ್ಮ ಯಾವುದೇ ಬಂಕರ್‌ಗಳಿಗೆ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಹಿಂದೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿದ್ದಾಗಲೂ ಪಾಕಿಸ್ತಾನ ಸೇನೆ, ತಮ್ಮ ನೆಲದ ಮೇಲೆ ಯಾವುದೇ ದಾಳಿಯಾಗಿಲ್ಲ ಎಂದು ತಳ್ಳಿಹಾಕಿತ್ತು. ಇದೀಗ ಮತ್ತೊಮ್ಮೆ ಯಾವುದೇ ದಾಳಿ ನಡೆದಿಲ್ಲ ಎಂದು ಉಲ್ಟಾ ಹೊಡೆದಿದೆ.
 
ಇಂದು ಬೆಳಿಗ್ಗೆ ಭಾರತೀಯ ಸೇನೆ ನಡೆಸಿದ ದಾಳಿಗೆ 10-12 ಬಂಕರ್‌ಗಳು ನಾಶವಾಗಿದ್ದು, ಕನಿಷ್ಠ 25ಕ್ಕೂ ಹೆಚ್ಚು ಸಾವು ನೋವು ಸಂಭವಿಸಿರಬಹುದು ಎಂದು ಭಾರತೀಯ ಸೇನೆ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ