ಮಾಜಿ ಪ್ರಧಾನಿ ಗಿಲಾನಿ, ಮಾಜಿ ಸಚಿವ ಅಮಿನ್ ಫಾ ಹೀಮ್ ವಿರುದ್ಧ ಬಂಧನದ ವಾರಂಟ್

ಗುರುವಾರ, 27 ಆಗಸ್ಟ್ 2015 (17:16 IST)
ಪಾಕಿಸ್ತಾನದ ಕೋರ್ಟೊಂದು ಮಾಜಿ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಮತ್ತು ಮಾಜಿ ಫೆಡರಲ್ ಸಚಿವ ಮಕ್ದೂಮ್ ಅಮಿನ್ ಫಹೀಮ್ ಅವರಿಗೆ ಏಳು ಶತಕೋಟಿ ರೂ. ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ಬಂಧನದ ವಾರಂಟ್‌ಗಳನ್ನು ಹೊರಡಿಸಿದೆ.
 
ಗಿಲಾನಿ ಮತ್ತು ಫಾಹಿಂ 500 ದಶಲಕ್ಷ ರೂ. ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇದೇ ರೀತಿ 12 ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದರು.  ವ್ಯಾಪಾರ ಅಭಿವೃದ್ಧಿ ಪ್ರಾಧಿಕಾರದ ಬಹು ಶತಕೋಟಿ ಹಗರಣದಲ್ಲಿ ಭಾಗಿಯಾದ ಆರೋಪವನ್ನು ಹೊರಿಸಲಾಗಿದೆ.  ಇಬ್ಬರು ನಾಯಕರನ್ನು ಸೆಪ್ಟೆಂಬರ್ 10ರೊಳಗೆ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಬೇಕೆಂದು ಅಧಿಕಾರಿಗಳಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.
 
ಇವರಿಬ್ಬರ ವಿರುದ್ಧ ಹತ್ತಾರು ಕೇಸುಗಳನ್ನು ಹಾಕಲಾಗಿದ್ದು, ಫೆಡರಲ್ ತನಿಖಾ ಸಂಸ್ಥೆಯು ಅವರ ವಿರುದ್ಧ 12 ಹೊಸ ಕೇಸ್‌ಗಳಿಗೆ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಬಂಧನದ ಆದೇಶ ಹೊರಡಿಸಲಾಯಿತು. 

ವೆಬ್ದುನಿಯಾವನ್ನು ಓದಿ