ಭಾನುವಾರವೂ ನಡುಗಿದ ನೇಪಾಳ: 6.6ರಷ್ಟು ತೀವ್ರತೆ ದಾಖಲು

ಭಾನುವಾರ, 26 ಏಪ್ರಿಲ್ 2015 (10:30 IST)
ನಿನ್ನಯಷ್ಟೇ ಭಾರೀ ಪ್ರಮಾಣದ ಭೂಕಂಪನದಿಂದ ತತ್ತರಿಸಿದ್ದ ನೇಪಾಳದಲ್ಲಿ ಇಂದು ಮುಂಜಾನೆ ಮತ್ತೆ ಕಂಪನ ಕಾಣಿಸಿಕೊಂಡಿದ್ದು, ಬೆಳಗಿಜಾವ 3 ಗಂಟೆ ಸುಮಾರಿನಲ್ಲಿ 6.6ರಷ್ಟು ತೀವ್ರತೆ ದಾಖಲಾಗಿದೆ.

ನಿನ್ನೆ ಸಂಭವಿಸಿದ್ದ ಕಮಪನಾಂಕದಲ್ಲಿ 7.9ರಷ್ಠು ತೀವ್ರತೆ ದಾಖಲಾಗಿತ್ತು. ಆದರೆ ಇಂದೂ ಕೂಡ ಭೂಮಿ ಕಂಪಿಸಿರುವ ಕಾರಣ ಮತ್ತಷ್ಟು ಅನಾಹುತವಾಗುವ ಸೂಚನೆ ಸಿಕ್ಕಿದೆ. ಅಲ್ಲದೆ ಇನ್ನೂ ಮೂರು ದಿನಗಳ ಕಾಲ ಭೂ ಕಂಪನ ಸಂಭವಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಪ್ರಾಕೃತಿಕ ವಿಕೋಪ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ನಿನ್ನೆ ಪ್ರತಿಕ್ರಿಯಿಸಿದ್ದ ಭಾರತದ ರಾಷ್ಟ್ರೀಯ ಜಿಯೋ ಫಿಸಿಕಲ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಆರ್.ಕೆ. ಛಡ್ಡಾ, ನೇಪಾಳ ಹಾಗೂ ಭಾರತದ ಹಲವೆಡೆ ನಡೆದಿರುವ ಭಾರೀ ಪ್ರಮಾಣದ ಭೂಕಂಪದ ತೀವ್ರತೆ ಇನ್ನೂ 10ರಿಂದ 15 ದಿನಗಳ ಕಾಲ ಮುಂದುವರೆಯಲಿದ್ದು, ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳು ಕಾಣಿಸುತ್ತಿವೆ ಎಂದು ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ