ಮನೆ ಬೀಗದ ಕೀ ತಂದ ಸಾವು

ಶನಿವಾರ, 30 ಜನವರಿ 2016 (09:20 IST)
ಮನೆಯ ಒಳಗಡೆ ಬಿಗದ ಕೈ ಮರೆತು ಬಂದ ವ್ಯಕ್ತಿಯೊಬ್ಬ ಬಹು ಅಂತಸ್ತಿನ ಕಟ್ಟಡದಲ್ಲಿದ್ದ ತನ್ನ ಮನೆ ಒಳಗೆ ಹೋಗಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಸ್ಪೇನ್‌ನಲ್ಲಿ ನಡೆದಿದೆ.

52 ವರ್ಷದ ಮಧ್ಯ ವಯಸ್ಕ ವ್ಯಕ್ತಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಹೋಗುವಾಗ ಕೀಯನ್ನು ಅಲ್ಲೇ ಮರೆತಿದ್ದ. ಹೀಗಾಗಿ ಕಿಟಕಿ ಮೂಲಕ ಮನೆ ಒಳಗೆ ಹೋಗುವ ಅಪಾಯಕಾರಿ ಪ್ಲಾನ್ ರೂಪಿಸಿದ.  ಪಕ್ಕದ ಮನೆಯವನ ಸಹಾಯದಿಂದ ಕಟ್ಟಡದ ಮೇಲ್ಭಾಗದಲ್ಲಿ ಹಗ್ಗವನ್ನು ಕಟ್ಟಿ ಕಿಟಕಿ ಮೂಲಕ ಮನೆಯ ಪ್ರವೇಶಿಸುವ ಸಾಹಸಕ್ಕೆ ಕೈ ಹಾಕಿದ ಆತ ಹಗ್ಗದಿಂದ ಇಳಿಯುತ್ತಿರುವಾಗ ಬಾಲೆನ್ಸ್ ತಪ್ಪಿ ಆತ ನೇರವಾಗಿ ಕೆಳಕ್ಕೆ ಬಿದ್ದಿದ್ದಾನೆ.
 
4ನೇ ಮಹಡಿಯಿಂದ ಬಿದ್ದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಅಪಾಯಕಾರಿ ಸಾಹಸವನ್ನು ನೋಡುತ್ತಿದ್ದ ಜನರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ