ಪಾಕ್-ಚೀನಾ ಭಾಯ್ ಭಾಯ್: ಸೌರಶಕ್ತಿಯಿಂದ ಬೆಳಗುವ ಸಂಸತ್ತು

ಮಂಗಳವಾರ, 23 ಫೆಬ್ರವರಿ 2016 (16:14 IST)
ಪಾಕಿಸ್ತಾನ ಸಂಸತ್ತು ಮಂಗಳವಾರ ಸೌರಶಕ್ತಿಯಿಂದ ಓಡುವ ಮೊಟ್ಟಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಯೋಜನೆಗೆ ಚೀನಾ 55 ದಶಲಕ್ಷ ಡಾಲರ್ ಆರ್ಥಿಕ ನೆರವು ಒದಗಿಸುವ ಮೂಲಕ ಬೆಂಬಲಿಸಿದೆ.
ಪ್ರಧಾನಿ ನವಾಜ್ ಷರೀಫ್ ಸರಳ ಸಮಾರಂಭದಲ್ಲಿ ಸಂಸತ್ತಿನ ಸೌರಶಕ್ತಿಯ ಕಟ್ಟಡವನ್ನು ಬೆಳಗಿಸಿದರು. ಸ್ವಾತಂತ್ರ್ಯದ ನಂತರ ವಿದ್ಯುತ್‌ನಲ್ಲಿ ಸೌರಶಕ್ತಿ ಮೂಲಕ ಸಂಸತ್ತು ಸ್ವಾವಲಂಬನೆ ಸಾಧಿಸಿರುವುದು ಇದೇ ಮೊದಲು.

ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳ ಸಂಸ್ಥೆಗಳು ಇದನ್ನು ಅನುಸರಿಸಬೇಕು ಎಂದು ಸಂಕ್ಷಿಪ್ತ ಭಾಷಣದಲ್ಲಿ ಅವರು ಹೇಳಿದರು.  ಪಾಕಿಸ್ತಾನ-ಚೀನಾದ ಸ್ನೇಹಕ್ಕೆ ಇದೊಂದು ಉದಾಹರಣೆ ಎಂದು ಷರೀಫ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ