ಭಾರತ ಐದನೇ ಬಲಿಷ್ಠ ಮಿಲಿಟರಿ ಶಕ್ತಿ: ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ

ಸೋಮವಾರ, 5 ಅಕ್ಟೋಬರ್ 2015 (20:32 IST)
ಜಾಗತೀಕರಣ ಕುರಿತು ಕ್ರೆಡಿಡ್ ಸ್ಯೂಸ್ ಬಹಿರಂಗ ಮಾಡಿರುವ ವರದಿಯಲ್ಲಿ ಭಾರತದ ಸಶಸ್ತ್ರ ಸೇನೆ ಜಗತ್ತಿನಲ್ಲಿ ಐದನೇ ಅತೀ ಬಲಿಷ್ಠ ಮಿಲಿಟರಿ ಶಕ್ತಿಯಾಗಿದ್ದು, ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಭಾರತ ಐದನೇ ಸ್ಥಾನದಲ್ಲಿದ್ದರೆ ಅಮೆರಿಕವು ಒಂದನೇ ನಂಬರ್ ಸ್ಥಾನದಲ್ಲಿದ್ದು, ರಷ್ಯಾ, ಚೀನಾ ಮತ್ತು ಜಪಾನ್ ನಂತರ ಸ್ಥಾನಗಳನ್ನು ಅಲಂಕರಿಸಿವೆ. 
ಜಾಗತೀಕರಣ ಪ್ರವೃತ್ತಿ ಕುರಿತು ಕ್ರೆಡಿಟ್ ಸೂಸ್ ಬಹಿರಂಗಪಡಿಸಿದ ವರದಿಯಲ್ಲಿ ಅಮೆರಿಕ 0.94 ಸ್ಕೋರ್ ಮಾಡಿದ್ದರೆ, ರಷ್ಯಾ 0.8, ಚೀನಾ 0.79, ಜಪಾನ್ 0.72, ಭಾರತ 0.69, ಫ್ರಾನ್ಸ್ 0.61 ಮತ್ತು ದಕ್ಷಿಣ ಕೊರಿಯಾ 0.52, ಇಟಲಿ 0.52 ಹಾಗೂ ಬ್ರಿಟನ್ 0.5 ಮತ್ತು ಟರ್ಕಿ 0.47 ಸ್ಕೋರ್ ಮಾಡಿವೆ. ಪಾಕಿಸ್ತಾನವು 0.41 ಸ್ಕೋರ್‌ನೊಂದಿಗೆ 11 ಸ್ಥಾನದಲ್ಲಿದೆ. 
 
ನಮ್ಮ ವಿಶ್ಲೇಷಣೆಯಲ್ಲಿ ಅಮೆರಿಕವು ಅದರ ನಿಕಟ ಎದುರಾಳಿಗಳಿಗೆ ಹೋಲಿಸಿದರೆ  ಸಾಂಪ್ರದಾಯಿಕ ಯುದ್ಧ ಸಾಮರ್ಥ್ಯದಲ್ಲಿ ಮಿಲಿಟರಿ ಪ್ರಾಬಲ್ಯವನ್ನು ಹೊಂದಿರುವುದನ್ನು ಬಹಿರಂಗ ಮಾಡಿದೆ ಎಂದು ವರದಿ ಹೇಳಿದೆ.

 ಅಮೆರಿಕದ 13900 ವಿಮಾನಗಳು, 920 ದಾಳಿ ಹೆಲಿಕಾಪ್ಟರ್‌ಗಳು, 20 ವಿಮಾನ ವಾಹಕ ನೌಕೆಗಳು ಮತ್ತು 72 ಜಲಾಂತರ್ಗಾಮಿಗಳಿಂದ ಯಾವುದೇ ರಾಷ್ಟ್ರದ ಮಿಲಿಟರಿ ಶಕ್ತಿಗಿಂತ ಮೇಲುಗೈ ಸಾಧಿಸಿದೆ. ಅಮೆರಿಕವು 2014ರಲ್ಲಿ 610 ಶತಕೋಟಿ ಡಾಲರ್ ಮಿಲಿಟರಿ ವೆಚ್ಚವನ್ನು ಮಾಡಿದೆ. ಮುಂದಿನ 9 ರಾಷ್ಟ್ರಗಳ ಮಿಲಿಟರಿ ಒಟ್ಟು ವೆಚ್ಚಕ್ಕಿಂತ ಇದು ಹೆಚ್ಚಾಗಿದೆ. 
 

ವೆಬ್ದುನಿಯಾವನ್ನು ಓದಿ