ಕಾಶ್ಮೀರ ಗಡಿಯಲ್ಲಿ ಸೈನಿಕರ ನಿಯೋಜಿಸುತ್ತಿರುವ ಪಾಕಿಸ್ತಾನ

ಭಾನುವಾರ, 6 ನವೆಂಬರ್ 2016 (11:17 IST)
ನವದೆಹಲಿ: ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ನಂತರ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಆಗಾಗ ಕದನ ವಿರಾಮ ಉಲ್ಲಂಘನೆ ನಡೆಸುತ್ತಿರುವ ಪಾಕಿಸ್ತಾನ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರ ಜಮಾವಣೆ ನಡೆಸುತ್ತಿದೆ.

ಕಳೆದ ಒಂದು ವಾರದಿಂದ ಯಾವುದೇ ಸನ್ನಿವೇಶಗಳಿಗೂ ಸನ್ನದ್ಧವಾಗಿರುವಂತೆ ಪಾಕಿಸ್ತಾನ ಗಡಿಯಲ್ಲಿ ಶಸ್ತ್ರ ಸಜ್ಜಿತ ಸೈನಿಕರನ್ನು ನಿಯೋಜಿಸಿದೆ. ಇಲ್ಲಿ ಸೈನಿಕರ ಚಟುವಟಿಕೆಗಳು ಚುರುಕುಗೊಂಡಿವೆ ಎಂದು ಆಂಗ್ಲ ಪತ್ರಿಕೆಯೊಂದು  ವರದಿ ಮಾಡಿದೆ.

ಇದರ ಹಿಂದಿರುವ ಸ್ಪಷ್ಟ ಉದ್ದೇಶ ತಿಳಿದಿಲ್ಲವಾದರೂ, ಅಂತಾರಾಷ್ಟ್ರೀಯ ಗಡಿಯಲ್ಲಿ ಸೈನಿಕರನ್ನು ಜಮಾವಣೆ ಮಾಡುತ್ತಿರುವುದು ಯಾವುದೇ ಪರಿಸ್ಥಿತಿಗಳನ್ನು ಎದುರಿಸಲು ಇರಬಹುದು ಎನ್ನಲಾಗಿದೆ. ಆಗಾಗ ಶಸ್ತ್ರಾಸ್ತ್ರ ಹೊತ್ತ ವಾಹನಗಳು ಇಲ್ಲಿ ತಿರುಗಾಡುತ್ತಿರುತ್ತವೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ