69ನೇ ಮಗುವಿಗೆ ಜನ್ಮ ನೀಡಿ ಪ್ರಸವದ ವೇಳೆಯೇ ಮೃತಪಟ್ಟ ಮಹಿಳೆ
ಶನಿವಾರ, 4 ಮಾರ್ಚ್ 2017 (16:55 IST)
69ನೇ ಮಗುವಿಗೆ ಜನ್ಮ ನೀಡಿದ ಮಹಿಳೆ ಪ್ರಸವದ ವೇಳೆಯೇ ಮೃತಪಟ್ಟಿರುವ ಘಟನೆ ಗಾಜಾದಿಂದ ವರದಿಯಾಗಿದೆ. ಕುಟುಂಬ ಯೋಜನೆ ಮತ್ತು ಗರ್ಭ ನಿರೋಧಕದ ಬಗ್ಗೆ ಸೂಕ್ತ ತಿಳುವಳಿಕೆ ಇಲ್ಲದ ಹಿನ್ನೆಲೆಯಲ್ಲಿ ಒಂದರ ಹಿಂದೊಂದರಂತೆ ಗರ್ಭ ಧರಿಸಿದ್ದ 40 ವರ್ಷ ಮಹಿಳೆ ಇದೀಗ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
40 ವರ್ಷದ ಮಹಿಳೆಗೆ 69 ಮಕ್ಕಳು ಹೇಗೆ ಜನಿಸಿದವು ಎಂಬ ನಿಮ್ಮ ಪ್ರಶ್ನೆಗೂ ಉತ್ತರ ಲ್ಲಿದೆ. ಈಕೆ 16 ಬಾರಿ ಅವಳಿ ಮಕ್ಕಳಿಗೆ, 7 ಬಾರಿ ತ್ರಿವಳಿ ಮಕ್ಕಳಿಗೆ, 4 ಬಾರಿ ಅ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಆದರೆ, ಇಷ್ಟು ಮಕ್ಕಳನ್ನ ಹೆತ್ತ ಮಹಿಲೆ ಅವುಗ ಲಾಲನೆ ಪೋಷಣೆ ಹೇಗೆ ಮಾಡುತ್ತಿದ್ದಳು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.